Publish Date: Mon, 26 Aug 2019 (10:37 IST)
Updated Date: Mon, 26 Aug 2019 (10:40 IST)
ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೌರವ್ ಗಂಗೂಲಿ ದಾಖಲೆ ಮುರಿದು, ಧೋನಿ ದಾಖಲೆ ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ ನಾಯಕರಾಗಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ದಾಖಲೆಯ ಪಟ್ಟಿಯಲ್ಲಿ ಈಗ ಧೋನಿ ಜತೆಗೆ ಜಂಟಿ ನಂ.1 ಸ್ಥಾನ ಹಂಚಿಕೊಂಡಿದ್ದಾರೆ. ಇದು ನಾಯಕರಾಗಿ ಕೊಹ್ಲಿಗೆ 27 ನೇ ಗೆಲುವಾಗಿತ್ತು. 47 ಪಂದ್ಯಗಳಿಂದ 27 ಗೆಲುವು ದಾಖಲಿಸಿದ್ದರೆ ಧೋನಿ 60 ಪಂದ್ಯಗಳಿಂದ 27 ಗೆಲುವಿನ ದಾಖಲೆ ಹೊಂದಿದ್ದಾರೆ. ಗಂಗೂಲಿ 49 ಪಂದ್ಯಗಳಿಂದ 21 ಗೆಲುವು ದಾಖಲಿಸಿದ್ದರು.
ಅಲ್ಲದೆ ವಿದೇಶಗಳಲ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು. ಈ ಮೊದಲು 28 ಪಂದ್ಯಗಳಿಂದ 11 ಗೆಲುವು ದಾಖಲಿಸಿದ ಗಂಗೂಲಿ ಅಗ್ರ ಸ್ಥಾನದಲ್ಲಿದ್ದರು. ಈಗ ಕೊಹ್ಲಿ 12 ನೇ ಗೆಲುವು ದಾಖಲಿಸಿ ನಂ.1 ಸ್ಥಾನ ಪಡೆದರು.