Publish Date: Mon, 26 Aug 2019 (05:58 IST)
Updated Date: Mon, 26 Aug 2019 (06:31 IST)
ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 318 ರನ್ ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಪಂದ್ಯವನ್ನೇ ಗೆದ್ದ ಸಾಧನೆ ಮಾಡಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿ ಭಾರತ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ವಿಂಡೀಸ್ ಗೆಲುವಿಗೆ 419 ರನ್ ಗಳ ಬೃಹತ್ ಮೊತ್ತ ನೀಡಿತು. ಆದರೆ ವಿಂಡೀಸ್ 100 ರನ್ ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ನಾಯಕ ಕೊಹ್ಲಿ 51 ರನ್ ಗೆ ಔಟಾದರೆ ಉಪನಾಯಕ ಅಜಿಂಕ್ಯಾ ರೆಹಾನೆ ಮಾತ್ರ ಶತಕ ಗಳಿಸಿ ಭಾರತದ ರನ್ ಗತಿ ಹೆಚ್ಚಿಸಿದರು. ರೆಹಾನೆ 102 ರನ್ ಗೆ ಔಟಾದರು. ಇವರಿಗೆ ಹನುಮ ವಿಹಾರಿ 93 ರನ್ ಗಳಿಸಿ ಜತೆಯಾದರು.