Select Your Language

Notifications

webdunia
webdunia
webdunia
webdunia

ವಿಂಡೀಸ್ ವಿರುದ್ಧ ಇಶಾಂತ್ ಶರ್ಮಾ ಪರಾಕ್ರಮ: ಮುನ್ನಡೆಯತ್ತ ಟೀಂ ಇಂಡಿಯಾ

ವಿಂಡೀಸ್ ವಿರುದ್ಧ ಇಶಾಂತ್ ಶರ್ಮಾ ಪರಾಕ್ರಮ: ಮುನ್ನಡೆಯತ್ತ ಟೀಂ ಇಂಡಿಯಾ
ಆಂಟಿಗುವಾ , ಶನಿವಾರ, 24 ಆಗಸ್ಟ್ 2019 (09:15 IST)
ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.


ಭಾರತ ತನ್ನ ಮೊದಲ ಇನಿಂಗ್ಸ್ ನಲ್ಲಿ 297 ರನ್ ಗಳಿಗೆ ಆಲೌಟ್ ಆಗಿತ್ತು. ನಿನ್ನೆಯ ದಿನದಾಟ ಮುಂದುವರಿಸಿದ ಭಾರತದ ಪರ ರವೀಂದ್ರ ಜಡೇಜಾ ಅರ್ಧಶತಕ ಗಳಿಸಿದರು. ಅವರು 58 ರನ್ ಗಳಿಗೆ ಔಟಾದರು. ಇಶಾಂತ್ ಶರ್ಮಾ 19 ರನ್ ಗಳಿಸಿದರು.

ನಂತರ ತನ್ನ ಸರದಿ ಆರಂಭಿಸಿದ ವಿಂಡೀಸ್ ಗೆ ವೇಗಿಗಳು ಮಾರಕವಾದರು. ಇಶಾಂತ್ ಶರ್ಮಾ 5 ವಿಕೆಟ್ ಗಳ ಗೊಂಚಲು ಪಡೆದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಕಬಳಿಸಿದರು. ಇದೀಗ ವಿಂಡೀಸ್ 108 ರನ್ ಗಳ ಹಿನ್ನಡೆಯಲ್ಲಿದೆ. ನಾಯಕ ಜೇಸನ್ ಹೋಲ್ಡರ್ 10, ಮಿಗ್ಯುಲ್ ಕ್ಯುಮಿನ್ಸ್ ಶೂನ್ಯ ಗಳಿಸಿ ಕ್ರೀಸ್ ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಟೆಸ್ಟ್ ನಿಂದ ಆರ್ ಅಶ್ವಿನ್ ರನ್ನು ಹೊರಗಿಟ್ಟಿದ್ದಕ್ಕೆ ಕಾರಣ ಹೇಳಿದ ಅಜಿಂಕ್ಯಾ ರೆಹಾನೆ