Publish Date: Fri, 23 Aug 2019 (09:52 IST)
Updated Date: Fri, 23 Aug 2019 (09:55 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇರಲಿ, ವಿಶ್ವದ ಯಾವುದೇ ಬ್ಯಾಟ್ಸ್ ಮನ್ ಇರಲಿ, ಸಚಿನ್ ತೆಂಡುಲ್ಕರ್ ಮಾಡಿದ ಯಾವುದೇ ವಿಶ್ವ ದಾಖಲೆ ಮುರಿಯಬಹುದು. ಆದರೆ ಈ ಒಂದು ದಾಖಲೆ ಮಾತ್ರ ಯಾರಿಂದಲೂ ಮುರಿಯಕ್ಕಾಗಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಕೊಹ್ಲಿ ಹಲವು ತೆಂಡುಲ್ಕರ್ ದಾಖಲೆಗಳನ್ನು ಮುರಿದಿದ್ದಾರೆ. ಇನ್ನೇನು ಅವರ ಶತಕಗಳ ದಾಖಲೆಯನ್ನೂ ಮುರಿಯುವ ಹಂತದಲ್ಲಿದ್ದಾರೆ. ಆದರೆ ಯಾರೇ ಆಗಲಿ, ಸಚಿನ್ ಮಾಡಿದ ಈ ಒಂದು ದಾಖಲೆ ಮುರಿಯುವುದು ಅಸಾಧ‍್ಯ ಅನಿಸುತ್ತದೆ ಎಂದು ಸೆಹ್ವಾಗ್ ಹೆಳಿದ್ದಾರೆ.
‘ಯಾವುದೇ ಬ್ಯಾಟ್ಸ್ ಮನ್ ಸಚಿನ್ ನ ಎಲ್ಲಾ ದಾಖಲೆ ಮುರಿಯಬಹುದು. ಆದರೆ ಗರಿಷ್ಠ 200 ಟೆಸ್ಟ್ ಆಡಿದ ದಾಖಲೆ ಮಾತ್ರ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದು ಸೆಹ್ವಾಗ್ ಹೇಳಿದ್ದಾರೆ. ಕೊಹ್ಲಿ ಕೂಡಾ ಸದ್ಯಕ್ಕೆ 77 ಟೆಸ್ಟ್ ಆಡಿದ್ದಾರಷ್ಟೆ. ಇತ್ತೀಚೆಗೆ ಟೆಸ್ಟ್ ಪಂದ್ಯಗಳು ಕಡಿಮೆ. ಬಹುಶಃ ಇದೇ ಕಾರಣಕ್ಕೆ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.