Publish Date: Thu, 29 Aug 2019 (09:19 IST)
Updated Date: Thu, 29 Aug 2019 (09:21 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಗಳ ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ಧೋನಿ ಇದೀಗ ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದಲೂ ಧೋನಿ ಹೊರಗುಳಿಯುವ ಸಾಧ್ಯತೆಯಿದೆ.
ಸೆಪ್ಟೆಂಬರ್ 15 ರಿಂದ ದ.ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಯಿಂದ ಧೋನಿ ಹೊರಗುಳಿದು ಮತ್ತೆ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಸೆಪ್ಟೆಂಬರ್ 15 ರಿಂದ ಮೂರು ಪಂದ್ಯಗಳ ಸರಣಿ ನಡೆಯಲಿದ್ದು, ಧರ್ಮಶಾಲಾ, ಮೊಹಾಲಿ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಟಿ20 ವಿಶ್ವಕಪ್ ಗೆ ಇನ್ನು ಒಂದು ವರ್ಷ ಬಾಕಿಯಿದ್ದು, ಅದಕ್ಕೆ ಮೊದಲು ಭಾರತ ಕೇವಲ 22 ಟಿ20 ಆಡಲಿದೆ. ಆದರೆ ಇದರಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಧೋನಿ ಆಡದೇ ಇರುವುದನ್ನು ನೋಡಿದರೆ ಟಿ20 ವಿಶ್ವಕಪ್ ನಲ್ಲೂ ಅವರು ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.