Select Your Language

Notifications

webdunia
webdunia
webdunia
Sunday, 13 April 2025
webdunia

TATA WPL 2025: ಆರ್ ಸಿಬಿ ಬಾಯ್ಸ್ ಗಿಂತ ಆರ್ ಸಿಬಿ ಗರ್ಲ್ಸ್ ಸ್ಟ್ರಾಂಗಾ, ನೀವೇನಂತೀರಿ

Smriti Mandhana

Krishnaveni K

ವಡೋದರಾ , ಮಂಗಳವಾರ, 18 ಫೆಬ್ರವರಿ 2025 (09:00 IST)
ವಡೋದರಾ: ಡಬ್ಲ್ಯುಪಿಎಲ್ ನಲ್ಲಿ ಸತತ ಮತ್ತೊಂದು ಗೆಲುವು ಸಾಧಿಸಿದ ಆರ್ ಸಿಬಿ ಹೆಣ್ಮಕ್ಳನ್ನು ಈಗ ಅಭಿಮಾನಿಗಳು ನೀವೇ ಸ್ಟ್ರಾಂಗ್ ಅಂತಿದ್ದಾರೆ. ನೀವೇನಂತೀರಿ?

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವನ್ನು ಆರ್ ಸಿಬಿ ಕೇವಲ ಗೆದ್ದಿದ್ದು ಮಾತ್ರವಲ್ಲ, ಚಾಂಪಿಯನ್ ರೀತಿ ಎಲ್ಲಾ ವಿಭಾಗದಲ್ಲಿ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆ ಆರ್ ಸಿಬಿ ದಾಳಿಗೆ ತತ್ತರಿಸಿ ಕೇವಲ 141 ರನ್ ಗಳಿಗೆ ಆಲೌಟ್ ಆಯಿತು.

ಬಳಿಕ ಬ್ಯಾಟಿಂಗ್ ನಲ್ಲೂ ಆರ್ ಸಿಬಿ ಭರ್ಜರಿ ಪ್ರದರ್ಶನ ನೀಡಿತು. ಬಹಳ ದಿನಗಳಿಂದ ಕ್ವೀನ್ ಸ್ಮೃತಿ ಮಂಧನಾ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾದಿದ್ದರು. ಅವರ ನಿರೀಕ್ಷೆಗೆ ತಕ್ಕಂತೇ ಒಂದು ಸಿಡಿಲಬ್ಬರದ ಪ್ರದರ್ಶನವನ್ನು ಸ್ಮೃತಿ ನೀಡಿದರು. 47 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಗಳೊಂದಿಗೆ 81 ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ್ದ ಡೇನಿಯಲ್ ವ್ಯಾಟ್ 33 ಎಸೆತಗಳಿಂದ 42 ರನ್ ಸಿಡಿಸಿದರು. ಎಲ್ಲಿಸ್ ಪೆರಿ ಅಜೇಯ 7, ರಿಚಾ ಘೋಷ್ ಅಜೇಯ 11 ರನ್ ಸಿಡಿಸಿ 16.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿಸಿದರು.

ಈ ಗೆಲುವಿನ ನಂತರ ಆರ್ ಸಿಬಿ ಅಭಿಮಾನಿಗಳು ನಿಜಕ್ಕೂ ಖುಷಿಯಾಗಿದ್ದಾರೆ. ಸೋಲುಗಳನ್ನೇ ಕಂಡಿದ್ದ ಅಭಿಮಾನಿಗಳಿಗೆ ಈ ಸೀಸನ್ ನಲ್ಲಿ ಸತತ ಗೆಲುವು ಕಂಡು ನಮ್ಮ ಹೆಣ್ಮಕ್ಳು ನಿಜಕ್ಕೂ ಸ್ಟ್ರಾಂಗ್ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

TATA WPL 2025: ಭಾರತ ತಂಡದ ಜೊತೆಗಾತಿ ಶಫಾಲಿ ವಿಕೆಟ್ ಕೀಳಲು ಪಕ್ಕಾ ಪ್ಲ್ಯಾನ್ ಮಾಡಿದ ಸ್ಮೃತಿ ಮಂಧನಾ ವಿಡಿಯೋ