ವಡೋದರಾ: ಡಬ್ಲ್ಯುಪಿಎಲ್ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿವರ್ ಬ್ರಂಟ್ ತೂಫಾನ್ ನಂತಹ ಇನಿಂಗ್ಸ್ ನಿಂದಾಗಿ ಮುಂಬೈ ಇಂಡಿಯನ್ಸ್ 164 ರನ್ ಗಳಿಸಿದೆ.
ಇಂದು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಗಿಳಿದ ಮುಂಬೈಗೆ ಟಾಪ್ ಬ್ಯಾಟಿಗರು ಕೈಕೊಟ್ಟರು. ಒಂದು ಹಂತದಲ್ಲಿ 32 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿದ್ದು ನಾಯಕಿ ಹರ್ಮನ್ ಪ್ರೀತ್ ಕೌರ್. ಆದರೆ ಉತ್ತಮ ಲಯದಲ್ಲಿದ್ದ ಅವರು 22 ಎಸೆತಗಳಿಂದ 42 ರನ್ ಸಿಡಿಸಿ ಔಟಾದರು.
ಆದರೆ ಇನ್ನೊಂದೆಡೆ ಏಕಾಂಗಿಯಾಗಿ ಹೋರಾಡಿದ ಸಿವರ್ ಬ್ರಂಟ್ ಒಟ್ಟು 59 ಎಸೆತ ಎದುರಿಸಿ ಅಜೇಯ 80 ರನ್ ಸಿಡಿಸಿದರು. ಉಳಿದಂತೆ ಎಲ್ಲಾ ಬ್ಯಾಟಿಗರದ್ದೂ ಏಕಂಕಿ ಕೊಡುಗೆ. ಅಂತಿಮವಾಗಿ ಮುಂಬೈ 19.1 ಓವರ್ ಗಳಲ್ಲಿ 164 ರನ್ ಗಳಿಗೆ ಆಲೌಟ್ ಆಯಿತು.
ಡೆಲ್ಲಿ ಪರ ಅನ್ನಾಬೆಲ್ ಸುದರ್ಲ್ಯಾಂಡ್ 3, ಶಿಖಾ ಪಾಂಡೆ 2, ಅಲಿಸಾ ಕ್ಯಾಪ್ಸಿ, ಮಿನ್ನು ಮಣಿ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಡೆಲ್ಲಿ ಗೆಲುವಿಗೆ 165 ರನ್ ಗಳಿಸಬೇಕಿದೆ.