Publish Date: Mon, 23 Feb 2026 (11:09 IST)
Updated Date: Mon, 23 Feb 2026 (11:15 IST)
ಅಹ್ಮದಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಈ ಮೂರು ತಪ್ಪುಗಳೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಅಕ್ಷರ್ ಪಟೇಲ್ ರನ್ನು ಸತತವಾಗಿ ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಆಡುವ ಬಳಗದಲ್ಲಿ ಸೇರಿಸಿಲ್ಲ. ಅವರ ಬದಲಿಗೆ ಟಿ20 ಮಾದರಿಗೆ ಅಷ್ಟೇನೂ ಸೂಟ್ ಆಗದ ವಾಷಿಂಗ್ಟನ್ ಸುಂದರ್ ಗೆ ಮಣೆ ಹಾಕಲಾಗುತ್ತಿದೆ. ಗಂಭೀರ್ ಕೋಚ್ ಆದ ಬಳಿಕ ವಾಷಿಂಗ್ಟನ್ ಸುಂದರ್ ಗೆ ಇನ್ನಿಲ್ಲದ ಆದ್ಯತೆ ಸಿಗುತ್ತಿರುವುದೇ ಯಕ್ಷ ಪ್ರಶ್ನೆಯಾಗಿದೆ. ಉಪನಾಯಕನಾಗಿದ್ದರೂ, ಟಿ20 ಮಾದರಿಗೆ ಹೇಳಿ ಮಾಡಿಸಿದ ಆಟಗಾರನಾಗಿದ್ದರೂ ಅಕ್ಷರ್ ಪಟೇಲ್ ರನ್ನು ಸತತವಾಗಿ ಹೊರಗಿಡುತ್ತಿರುವುದೇ ಮೊದಲ ತಪ್ಪು.
ಅಭಿಷೇಕ್ ಶರ್ಮಾ ಫಾರ್ಮ್ ಕಳೆದುಕೊಂಡಿದ್ದಾರೆ. ಆದರೂ ಅದನ್ನು ಒಪ್ಪಿಕೊಳ್ಳಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ರೆಡಿಯಿಲ್ಲ. ಅವರಿಗೆ ರೋಹಿತ್, ಕೊಹ್ಲಿ ಮಾದರಿಯ ಬಿಲ್ಡಪ್ ನೀಡಲಾಗುತ್ತಿದೆ. ಅಭಿಷೇಕ್ ಶರ್ಮಾರನ್ನು ಕಾಪಾಡಲು ಇಶಾಂತ್ ಶರ್ಮಾರನ್ನು ಮೊದಲು ಸ್ಟ್ರೈಕ್ ಪಡೆಯಲು ಹೇಳಿ ಅವರ ಬ್ಯಾಟಿಂಗ್ ನ್ನೂ ಹಳ್ಳ ಹಿಡಿಸಲಾಗುತ್ತಿದೆ.
ತಿಲಕ್ ವರ್ಮಾ ಕೂಡಾ ಈಗ ಫಾರ್ಮ್ ನಲ್ಲಿಲ್ಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದ ಮೇಲೆ ತಿಲಕ್ ರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಹಾಗಿದ್ದರೂ ಅವರನ್ನೇ ಮತ್ತೆ ಮತ್ತೆ ಆಡಿಸಲಾಗುತ್ತಿದೆ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಗೆ ಒಂದು ಅವಕಾಶ ನೀಡಬಹುದಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಬ್ಯಾಟಿಗರಿಗೂ ಸಿಕ್ಸ್ ಹೊಡೆಯುವ ಹುಚ್ಚುತನ. ಪರಿಸ್ಥಿತಿಗೆ ತಕ್ಕಂತೆ ಆಡುವ, ಹೊಣೆಗಾರಿಕೆಯಿಂದ ಇನಿಂಗ್ಸ್ ಕಟ್ಟುವ ಜವಾಬ್ಧಾರಿ ಯಾರಿಗೂ ಇದ್ದಂತಿಲ್ಲ.ಇದೇ ಕಾರಣಕ್ಕೆ ಟೀಂ ಇಂಡಿಯಾ ಸೋತಿದೆ.