Select Your Language

Notifications

webdunia
webdunia
webdunia
webdunia

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪಲು ಏನು ಮಾಡಬೇಕು

Team India in T20 WC
Photo Credit: X
ಮುಂಬೈ: ಟಿ20 ವಿಶ್ವಕಪ್ ಸೂಪರ್ 8 ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ  ವಿರುದ್ಧ ಸೋತ ಟೀಂ ಇಂಡಿಯಾಗೆ ಈಗ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಸೆಮಿಫೈನಲ್ ಗೆ ತಲುಪಲು ಏನು ಮಾಡಬೇಕು ಇಲ್ಲಿದೆ ಲೆಕ್ಕಾಚಾರ.
 

ಟಿ20 ವಿಶ್ವಕಪ್ ನಲ್ಲಿ ಸೂಪರ್ 8 ಹಂತದಲ್ಲಿ ಮೂರು ಪಂದ್ಯಗಳಿವೆ. ಆ ಪೈಕಿ ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 76 ರನ್ ಗಳಿಂದ ಸೋತಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ 2 ಅಂಕಗಳೊಂದಿಗೆ +3.800 ರನ್ ರೇಟ್ ಪಡೆದಿದ್ದು ಅಗ್ರ ಸ್ಥಾನದಲ್ಲಿದೆ.

ಇತ್ತ ಟೀಂ ಇಂಡಿಯಾ ಸೋತಿರುವುದರಿಂದ ರನ್ ರೇಟ್ -3.800 ಪಡೆದುಕೊಂಡಿದೆ. ಇದೀಗ ಭಾರತಕ್ಕೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಹಂತದ ಪಂದ್ಯಗಳಿವೆ. ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 4 ಅಂಕ ಸಿಗಲಿದೆ.

ಆದರೆ ಸೆಮಿಫೈನಲ್ ಗೇರಬೇಕಾದರೆ ಈ ಎರಡೂ ತಂಡಗಳ ವಿರುದ್ಧ ಉತ್ತಮ ರನ್ ರೇಟ್ ಕೂಡಾ ಪಡೆಯುವ ಅನಿವಾರ್ಯವಾಗಿದೆ. ದಕ್ಷಿಣ ಆಫ್ರಿಕಾ ಒಂದು ಪಂದ್ಯದಲ್ಲಿ ಸೋತರೂ ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲವರ್‌ಗೆ ಅದ್ಧೂರಿ ಪಾರ್ಟಿ ಕೊಟ್ಟ ಬೆನ್ನಲ್ಲೇ ಮಗ ಅಗಸ್ತ್ಯನಿಗೆ ಸರ್ಪ್ರೈಸ್ ಕೊಟ್ಟ ಹಾರ್ದಿಕ್‌, ಮಾಜಿ ಪತ್ನಿಯೂ ಭಾಗಿ