Select Your Language

Notifications

webdunia
webdunia
webdunia
webdunia

T20 WC: ರೋಹಿತ್ ಶರ್ಮಾರನ್ನು ಕಾಪಿ ಮಾಡಿ ಗತ್ತು ತೋರಿಸಿದ ಸೂರ್ಯಕುಮಾರ್ ಯಾದವ್ ಫುಲ್ ಟ್ರೋಲ್

Suryakumar Yadav
Photo Credit: X
ಅಹ್ಮದಾಬಾದ್: ರೋಹಿತ್ ಶರ್ಮಾರನ್ನು ಕಾಪಿ ಮಾಡಲು ಹೋಗಿ ಸೂರ್ಯಕುಮಾರ್ ಯಾದವ್ ಈಗ ಫುಲ್ ಟ್ರೋಲ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಸೂರ್ಯ ಗತ್ತಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಪತ್ರಿಕಾಗೋಷ್ಠಿಗಳಲ್ಲಿ, ಸಂದರ್ಶಕರ ಮುಂದೆ ತಮ್ಮದೇ ಶೈಲಿಯಲ್ಲಿ ಮಾತನಾಡುತ್ತಾರೆ. ಅವರ ವರ್ತನೆ ಅತಿರೇಕ ಎಂದು ಎಂದೂ ಅನಿಸಿದ್ದಿಲ್ಲ. ತಮಾಷೆ ಮಾಡುತ್ತಲೇ ಎಲ್ಲರನ್ನೂ ನಗಿಸುತ್ತಿದ್ದರು.

ಇದೀಗ ಪತ್ರಿಕಾಗೋಷ್ಠಿಗಳಲ್ಲಿ ಸೂರ್ಯ ಕೂಡಾ ಅವರನ್ನೇ ಕಾಪಿ ಮಾಡಲು ಪ್ರಯತ್ನಿಸುತ್ತಿದ್ದಾರೇನೋ ಎಂಬ ಅನುಮಾನವಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ರಂತೇ ತಮಾಷೆಯಾಗಿಯೇ ಉತ್ತರಿಸುತ್ತಾರೆ. ಆದರೆ ರೋಹಿತ್ ತಮಾಷೆ ಯಾವತ್ತೂ ಎದುರಾಳಿಗಳನ್ನು ಅಣಕವಾಡುವಂತೆ ಇರಲಿಲ್ಲ. ಆದರೆ ಸೂರ್ಯ ಪತ್ರಕರ್ತರ ಪ್ರಶ್ನೆಗಳಿಗೆ ಅಣಕವಾಡುವಂತೆ ಉತ್ತರಿಸುತ್ತಾರೆ. ಅಭಿಷೇಕ್ ಶರ್ಮಾರನ್ನು ಹೊರಗಿಡುತ್ತೀರಾ ಎಂದು ಪ್ರಶ್ನೆ ಕೇಳಿದ್ದಕ್ಕೆ, ಅಭಿಷೇಕ್ ರನ್ನು ಹೊರಗಿಡಬೇಕಾ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ತಂಡದ ಮುಂದಿನ ಪ್ಲ್ಯಾನಿಂಗ್ ಬಗ್ಗೆ ಕೇಳಿದಾಗಲೂ ಚೆನ್ನಾಗಿ ಬ್ಯಾಟ್ ಮಾಡಬೇಕು, ಬೌಲಿಂಗ್ ಮಾಡಬೇಕು ಎಂದು ಉಡಾಫೆಯಲ್ಲಿ ಉತ್ತರಿಸಿದ್ದಾರೆ. ರೋಹಿತ್ ಶರ್ಮಾರನ್ನು ಕಾಪಿ ಮಾಡಲು ಹೋಗುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇನ್ನೊಂದೆಡೆ ಸೂರ್ಯಕುಮಾರ್ ಅತಿಯಾದ ಆತ್ಮವಿಶ್ವಾಸವೇ ಈ ಸೋಲಿಗೆ ಕಾರಣ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪಲು ಏನು ಮಾಡಬೇಕು