Publish Date: Thu, 26 Feb 2026 (09:15 IST)
Updated Date: Thu, 26 Feb 2026 (09:19 IST)
ಚೆನ್ನೈ: ಟಿ20 ವಿಶ್ವಕಪ್ 2026 ರ ಸೂಪರ್ 8 ಹಂತದಲ್ಲಿ ಇಂದು ಟೀಂ ಇಂಡಿಯಾ ಎರಡನೇ ಪಂದ್ಯವಾಡಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ ಇಂದು ಗೆಲ್ಲಲೇಬೇಕಾದ ಒತ್ತಡವಿದೆ. ಅಭಿಮಾನಿಗಳಂತೂ ಇಂದಾದರೂ ಕರೆಕ್ಟ್ ಟೀಂ ಸೆಲೆಕ್ಷನ್ ಮಾಡಿ ಅಂತಿದ್ದಾರೆ.
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಅಂತರದಿಂದ ಸೋತ ಟೀಂ ಇಂಡಿಯಾ ನೆಟ್ ರನ್ ರೇಟ್ -3.8 ಕ್ಕೆ ಬಂದಿಳಿದಿದೆ. ಇದೀಗ ಸೆಮಿಫೈನಲ್ ಗೇರಲು ಮುಂದಿನ ಎರಡೂ ಸೂಪರ್ 8 ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲುವ ಅನಿವಾರ್ಯತೆಗೆ ಸೂರ್ಯಕುಮಾರ್ ಯಾದವ್ ಪಡೆ ಬಂದಿದೆ.
ತವರಿನಲ್ಲಿ ವಿಶ್ವಕಪ್ ಗೆಲ್ಲಬೇಕು ಎಂಬ ಕನಸು ನನಸಾಗಬೇಕಿದ್ದರೆ ಟೀಂ ಇಂಡಿಯಾ ಕೆಲವು ಅಸಂಬದ್ಧ ನಡೆ ಬಿಟ್ಟು ಅತ್ಯುತ್ತಮ ತಂಡ ಆಯ್ಕೆ ಮಾಡಬೇಕು. ಸತತ ಎರಡು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ರಂತಹ ಟಿ20 ಸ್ಪೆಷಲಿಸ್ಟ್ ಆಲ್ ರೌಂಡರ್ ಕೈಬಿಟ್ಟು ತಪ್ಪು ಮಾಡಿದ್ದ ಟೀಂ ಇಂಡಿಯಾ ಇಂದು ಅವರನ್ನು ಆಡಿಸಲೇಬೇಕಿದೆ. ಇನ್ನು, ಅಭಿಷೇಕ್ ಶರ್ಮಾ ಮೇಲೆ ಅತಿಯಾಗಿ ನಂಬಿಕೆಯಿಡುವುದನ್ನು ಬಿಟ್ಟು ಬೇರೆ ಆಟಗಾರರತ್ತ ಚಿತ್ತ ಹರಿಸಬೇಕಿದೆ. ಅಲ್ಲದೆ, ರಿಂಕು ಸಿಂಗ್ ಕೈ ಬಿಟ್ಟು ಮೊಹಮ್ಮದ್ ಸಿರಾಜ್ ಗೆ ಅವಕಾಶ ನೀಡಿದರೂ ತಪ್ಪಿಲ್ಲ.
ಇಂದಿನ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಯಾವುದೇ ಬದಲಾವಣೆ ನಿರೀಕ್ಷೆಯಿಲ್ಲ. ಇಂದಿನ ಈ ಪಂದ್ಯ ಚೆನ್ನೈನ ಚಿಪಾಕ್ ಮೈದಾನದಲ್ಲಿ ಸಂಜೆ 7 ಗಂಟೆಗೆ
ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.