Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಗಿದ್ದ ಒಂದೇ ಒಂದು ವೀಕ್ನೆಸ್ ಎಂದರೆ ಇದೇ ಅಂತೆ

Rahul Dravid
ಬೆಂಗಳೂರು: ಟೀಂ ಇಂಡಿಯಾ ಕಂಡ ಸರ್ವಶ್ರೇಷ್ಠ ಆಟಗಾರರ ಸಾಲಿನಲ್ಲಿ ಬರುವ ದಿ ವಾಲ್ ರಾಹುಲ್ ದ್ರಾವಿಡ್ ಗೆ ಒಂದೇ ಒಂದು ವೀಕ್ನೆಸ್ ಇತ್ತಂತೆ. ಅದೇನು ಎಂದು ಹಿಂದೊಮ್ಮೆ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ರಾಹುಲ್ ದ್ರಾವಿಡ್ ತಾಳ್ಮೆಯ ಪ್ರತಿರೂಪ. ಬ್ಯಾಟಿಂಗ್ ಗೆ ನಿಂತರೆ ಅವರನ್ನು ಅಲ್ಲಾಡಿಸುವುದೂ ಕಷ್ಟವಾಗಿತ್ತು. ಮೈದಾನದಿಂದ ಹೊರಗೂ ಅಷ್ಟೇ. ಒಂದೇ ಒಂದು ದಿ ಚೆಲ್ಲು ಚೆಲ್ಲಾಗಿ ವರ್ತಿಸಿದವರೂ ಅಲ್ಲ. ಜೆಂಟಲ್ ಮ್ಯಾನ್ ಎಂದು ಹೇಳುವುದಕ್ಕೆ ತಕ್ಕಂತೆ ಇದ್ದವರು.

ಆದರೆ ಅವರು ಆಡುತ್ತಿದ್ದ ದಿನಗಳಲ್ಲಿ ಒಂದು ವೀಕ್ನೆಸ್ ಇತ್ತಂತೆ. ಇದನ್ನು ಅವರ ಜೊತೆಗೆ ಅನೇಕ ಜೊತೆಯಾಟವಾಡಿರುವ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿಕೊಂಡಿದ್ದಾರೆ. ಇಎಸ್ಪಿಎನ್ ಗೆ ನೀಡಿದ ಸಂದರ್ಶನದಲ್ಲಿ ವಿವಿಎಸ್ ಲಕ್ಷ್ಮಣ್ ಗೆ ನೀವು ನೋಡಿದ ಹಾಗೆ ರಾಹುಲ್ ದ್ರಾವಿಡ್ ಗೆ ಮೈದಾನದ ಹೊರತಾಗಿ ಇದ್ದಿದ್ದ ವೀಕ್ನೆಸ್ ಎಂದರೆ ಏನು ಎಂದು ಪ್ರಶ್ನಿಸಲಾಯಿತು.

ಅದಕ್ಕೆ ಉತ್ತರಿಸಿದ ವಿವಿಎಸ್ ಲಕ್ಷ್ಮಣ್ ‘ದ್ರಾವಿಡ್ ಗೂ ಒಂದು ವೀಕ್ನೆಸ್ ಇತ್ತು. ಅದೇನೆಂದರೆ ಅವರಿಗೆ ಆಡುವ ದಿನಗಳಲ್ಲಿ ಚಾಕಲೇಟ್, ಐಸ್ ಕ್ರೀಂ ಎಂದರೆ ತುಂಬಾ ಇಷ್ಟ. ಅದನ್ನು ತಿನ್ನುವುದನ್ನು ಕಂಟ್ರೋಲ್ ಮಾಡಲು ತುಂಬಾ ಕಷ್ಟಪಡುತ್ತಿದ್ದರು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಜಮ್ಮು ಕಾಶ್ಮೀರ ಉತ್ತಮ ಆರಂಭ: ಯಾರಾಗುತ್ತಾರೆ ದೇಶೀಯ ಕ್ರಿಕೆಟ್‌ನ ಒಡೆಯ