Publish Date: Wed, 25 Feb 2026 (11:27 IST)
Updated Date: Wed, 25 Feb 2026 (11:34 IST)
ಮುಂಬೈ: ಸಿಲಿಂಡರ್ ಹೊತ್ತು ಮಗನನ್ನು ಕ್ರಿಕೆಟಿಗನಾಗಿ ಮಾಡಿದ ತಂದೆ ಐಸಿಯುವಿನಲ್ಲಿ ಮಲಗಿರುವಾಗ ಟಿ20 ವಿಶ್ವಕಪ್ ಟೂರ್ನಿಯನ್ನೂ ಬಿಟ್ಟು ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಮನೆಗೆ ಮರಳಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ ಸೂಪರ್ 8 ಹಂತದ ಪಂದ್ಯಕ್ಕೆ ಮೊದಲು ರಿಂಕು ಸಿಂಗ್ ಗೆ ಆಘಾತ ಎದುರಾಗಿದೆ. ದಿಡೀರ್ ಆಗಿ ಅವರು ಮನೆಗೆ ಮರಳಿದ್ದಾರೆ. ತಂದೆಗೆ ಹುಷಾರಿಲ್ಲದೇ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ತುರ್ತು ಕಾರಣಗಳಿಗೆ ಅವರು ಮನೆಗೆ ಮರಳಿದ್ದಾರೆ.
ರಿಂಕು ಸಿಂಗ್ ತಂದೆ ತೀರಾ ಕಡುಬಡತನದಲ್ಲಿ ಮಗನನ್ನು ಕ್ರಿಕೆಟಿಗನಾಗಿಸಲು ಪ್ರಯತ್ನ ಪಟ್ಟವರು. ಅವರು ಸಿಲಿಂಡರ್ ಡೆಲಿವರಿ ಮಾಡುತ್ತಿದ್ದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಮಗ ಕ್ರಿಕೆಟಿಗನಾದ ಮೇಲೂ ಅವರು ತಮ್ಮ ವೃತ್ತಿ ಬಿಟ್ಟಿರಲಿಲ್ಲ.
ಇದೀಗ ಅವರಿಗೆ ಲಿವರ್ ಕ್ಯಾನ್ಸರ್ ಎನ್ನಲಾಗಿದೆ. ಹೀಗಾಗಿ ಅವರ ಸ್ಥಿತಿ ಗಂಭೀರವಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ತಂದೆಯನ್ನು ನೋಡಲು ರಿಂಕು ವಿಶ್ವಕಪ್ ಟೂರ್ನಿಯನ್ನೂ ಬಿಟ್ಟು ಮನೆಗೆ ಬಂದಿದ್ದಾರೆ.