Daily Horoscope

Select Your Language

Notifications

webdunia
webdunia
webdunia
webdunia

ಪಂಚೆಯುಟ್ಟುಕೊಂಡು ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಬಂದ ಟೀಂ ಇಂಡಿಯಾ ಕ್ರಿಕೆಟಿಗರು Video

Suryakumar Yadav
Photo Credit: X
ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವಾಡಲು ಬಂದ ಟೀಂ ಇಂಡಿಯಾ ಕ್ರಿಕೆಟಿಗರು ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ನಿನ್ನೆಯೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ತಿರುವನಂತಪುರಂಗೆ ಬಂದಿಳಿದಿತ್ತು. ಇಂದು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸೇರಿದಂತೆ ಕ್ರಿಕೆಟಿಗರು ಇಲ್ಲಿನ ಇತಿಹಾಸ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಸೂರ್ಯ ಕುಮಾರ್ ಜೊತೆಗೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ರಿಂಕು ಸಿಂಗ್ ಸೇರಿದಂತೆ ಕೆಲವು ಕ್ರಿಕೆಟಿಗರಿದ್ದರು. ಎಲ್ಲರೂ ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಹಾಕಿಕೊಂಡು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅನಂತಪದ್ಮನಾಭ ಸ್ವಾಮಿ ದೇವಾಲಯದ ಒಳಗೆ ಪುರುಷರು ಪಂಚೆ, ಶಲ್ಯ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.

ಇದಕ್ಕೆ ಮೊದಲು ಕೆಲವು ದಿನಗಳ ಹಿಂದೆ ಭಾರತ ಮಹಿಳಾ ಕ್ರಿಕೆಟ್ ತಂಡ ತಿರುವನಂತಪುರಂಗೆ ಬಂದಿದ್ದಾಗಲೂ ಅನಂತಪದ್ಮನಾಭನ ದರ್ಶನ ಪಡೆದಿದ್ದರು. ಸ್ಮೃತಿ ಮಂಧಾನ, ಆರುಂಧತಿ ರೆಡ್ಡಿ ಸೇರಿದಂತೆ ಕ್ರಿಕೆಟ್ ಆಟಗಾರ್ತಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ದರ್ಶನ ಪಡೆದಿದ್ದರು.




Team India have taken blessings at all 5 venues against New Zealand. ❤️ pic.twitter.com/zJrgIbN2xr

 

— Jara (@JARA_Memer) January 30, 2026

Share this Story:

Follow Webdunia kannada

ಮುಂದಿನ ಸುದ್ದಿ

ಪಿಟಿ ಉಷಾ ಪತಿ ಶ್ರೀನಿವಾಸನ್ ಇನ್ನಿಲ್ಲ: ಖುದ್ದು ಕರೆ ಮಾಡಿದ ಪ್ರಧಾನಿ ಮೋದಿ