Select Your Language

Notifications

webdunia
webdunia
webdunia
webdunia

ಐಪಿಎಲ್ ನಿಂದಲೂ ನಿವೃತ್ತಿ ಘೋಷಿಸಿದ ಸುರೇಶ್ ರೈನಾ

ಐಪಿಎಲ್ ನಿಂದಲೂ ನಿವೃತ್ತಿ ಘೋಷಿಸಿದ ಸುರೇಶ್ ರೈನಾ
ಮುಂಬೈ , ಮಂಗಳವಾರ, 6 ಸೆಪ್ಟಂಬರ್ 2022 (18:44 IST)
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ರೈನಾ 2020 ರಲ್ಲಿ ಧೋನಿ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದರು. ಅದಾದ ಬಳಿಕ ಐಪಿಎಲ್ ನಲ್ಲಿ ಮುಂದುವರಿದಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಅವರನ್ನು ಯಾವ ತಂಡವೂ ಖರೀದಿ ಮಾಡಿರಲಿಲ್ಲ.

ಇದೀಗ ರೈನಾ ಐಪಿಎಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ ನಲ್ಲಿ 205 ಪಂದ್ಯಗಳನ್ನಾಡಿರುವ ರೈನಾ ಇದುವರೆಗೆ ರಾಜಸ್ಥಾನ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಚೆನ್ನೈ ತಂಡದಲ್ಲಿ ಅವರು ಹೆಚ್ಚು ಪ್ರಖ್ಯಾತಿ ಪಡೆದಿದ್ದರು. ಐಪಿಎಲ್ ನಲ್ಲಿ 5528 ರನ್ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶೀ ಲೀಗ್ ನಲ್ಲಿ ಆಡುವ ಉದ್ದೇಶದಿಂದ ಸಕ್ರಿಯ ಕ್ರಿಕೆಟ್ ನಿಂದ ನಿವೃತ್ತರಾಗಿರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೂಷಿಸಿದವರಿಗೆ ಮೈದಾನದಲ್ಲೇ ಉತ್ತರ ಕೊಡು: ಅರ್ಷ್ ದೀಪ್ ಸಿಂಗ್ ಗೆ ಸಚಿನ್ ಸಲಹೆ