ಮುಂಬೈ: 2023 ರಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರಲ್ವಾ? ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿಕೆ ಈಗ ಅನುಮಾನ ಹುಟ್ಟಿಸಿದೆ.
ಈ ಐಪಿಎಲ್ ನಲ್ಲಿ ಮೊದಲು ಚೆನ್ನೈ ತಂಡದ ನಾಯಕರಾಗಿದ್ದ ಜಡೇಜಾರನ್ನು ಬಳಿಕ ಕಳಪೆ ಪ್ರದರ್ಶನ ಹಿನ್ನಲೆಯಲ್ಲಿ ನಾಯಕತ್ವದಿಂದ ಕಿತ್ತು ಹಾಕಲಾಗಿತ್ತು. ಇದೇ ಕಾರಣಕ್ಕೆ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಹೀಗಾಗಿ ಅವರು ಮುಂದಿನ ವರ್ಷ ಸಿಎಸ್ ಕೆ ಪರ ಆಡುವುದು ಅನುಮಾನ ಎನ್ನಲಾಗಿತ್ತು. ಈಗ ಆಕಾಶ್ ಚೋಪ್ರಾ ಕೂಡಾ ಇದೇ ಹೇಳಿಕೆ ನೀಡಿದ್ದಾರೆ. ಮುಂದಿನ ವರ್ಷದ ಐಪಿಎಲ್ ಗೆ ಜಡೇಜಾರನ್ನು ಸಿಎಸ್ ಕೆ ರಿಲೀಸ್ ಮಾಡಬಹುದು ಎಂದಿದ್ದಾರೆ. ಏನೇ ಆದರೂ 16 ಕೋಟಿ ರೂ.ಗೆ ತನ್ನಲ್ಲೇ ಉಳಿಸಿಕೊಂಡಿದ್ದ ಜಡೇಜಾರನ್ನು ಸಿಎಸ್ ಕೆ ಈ ರೀತಿ ಬೀಳ್ಕೊಡುವುದು ವಿಷಾಧನೀಯ.