Select Your Language

Notifications

webdunia
webdunia
webdunia
Saturday, 5 April 2025
webdunia

1 ಕೋಟಿ ರೂ.ವನ್ನು ಐಪಿಎಲ್‌ ಬೆಟ್ಟಿಂಗ್‌ ನಲ್ಲಿ ಕಳೆದುಕೊಂಡ ಪೋಸ್ಟ್‌ ಮಾಸ್ಟರ್!

Postmaster Lost 1 Crore In IPL Bets. He Used Fixed Deposits Of 24 Families
bengaluru , ಬುಧವಾರ, 25 ಮೇ 2022 (15:19 IST)
24 ಕುಟುಂಬಗಳು ಫಿಕ್ಸೆಡ್‌ ಡೆಪಾಸಿಟ್‌ ಇರಿಸಿದ್ದ 1 ಕೋಟಿ ರೂ. ಹಣವನ್ನು ಪೋಸ್ಟ್‌ ಮಾಸ್ಟರ್‌ ವೊಬ್ಬ ಐಪಿಎಲ್‌ ಬೆಟ್ಟಿಂಗ್‌ ನಲ್ಲಿ ಕಳೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಾಗರ್‌ ಜಿಲ್ಲೆಯ ಬಿನಾ ಸಬ್‌ ಪೋಸ್ಟ್‌ ಆಫೀಸ ಪೋಸ್ಟ್‌ ಮಾಸ್ಟರ್‌ ವಿಶಾಲ್‌ ಅಶ್ವೀರ್‌ ಅವರನ್ನು ಪೊಲೀಸರು ಮೇ 20ರಂದು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ.
ನಕಲಿ ಖಾತೆಗಳನ್ನು ತೆರೆಯಲು ಅಂಚೆ ಕಚೇರಿಯ ಅಸಲಿ ಪಾಸ್‌ ಬುಕ್‌ ಗಳನ್ನೇ ಪೋಸ್ಟ್‌ ಮಾಸ್ಟರ್‌ ವಿಶಾಲ್‌ ಅಶ್ವೀರ್‌ ಬಳಸಿದ್ದು, ಖಾತೆಯಲ್ಲಿ ಜಮಾ ಮಾಡಲು ನೀಡಿದ್ದ ಎಲ್ಲಾ ಹಣವನ್ನು ಐಪಿಎಲ್‌ ಬೆಟ್ಟಿಂಗ್‌ ಗೆ ಬಳಸಿದ್ದ.
ಎರಡು ವರ್ಷಗಳಿಂದ ಐಪಿಎಲ್‌ ನಲ್ಲಿ ಬೆಟ್ಟಿಂಗ್‌ ಗೆ ಜನರ ಹಣವನ್ನು ಬಳಸಿದ್ದ ಎಂದು ತಿಳಿದು ಬಂದಿದ್ದು, ಬಿನಾ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈನಲ್ಲಿ ಬಿಜೆಪಿ ಸದಸ್ಯನ ಹತ್ಯೆ!