Select Your Language

Notifications

webdunia
webdunia
webdunia
webdunia

ದೂಷಿಸಿದವರಿಗೆ ಮೈದಾನದಲ್ಲೇ ಉತ್ತರ ಕೊಡು: ಅರ್ಷ್ ದೀಪ್ ಸಿಂಗ್ ಗೆ ಸಚಿನ್ ಸಲಹೆ

ದೂಷಿಸಿದವರಿಗೆ ಮೈದಾನದಲ್ಲೇ ಉತ್ತರ ಕೊಡು: ಅರ್ಷ್ ದೀಪ್ ಸಿಂಗ್ ಗೆ ಸಚಿನ್ ಸಲಹೆ
ದುಬೈ , ಮಂಗಳವಾರ, 6 ಸೆಪ್ಟಂಬರ್ 2022 (18:13 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಅರ್ಷ್ ದೀಪ್ ಸಿಂಗ್ ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅಮೂಲ್ಯ ಸಲಹೆ ಕೊಟ್ಟಿದ್ದಾರೆ.

ಅರ್ಷ್ ದೀಪ್ ಸಿಂಗ್ ಗೆ ಖಲಿಸ್ತಾನಿ, ಪ್ರತ್ಯೇಕತಾವಾದಿ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಅವರ ವಿಕಿಪೀಡಿಯಾ ಪುಟದಲ್ಲಿ ಅವಮಾನ ಮಾಡಲಾಗಿತ್ತು.

ಈ ಕುರಿತಾಗಿ ಯುವ ವೇಗಿಗೆ ಸಾಂತ್ವನ ಹೇಳಿರುವ ಸಚಿನ್ ತೆಂಡುಲ್ಕರ್ ‘ಕ್ರಿಕೆಟ್ ನಲ್ಲಿ ವೈಯಕ್ತಿಕ ನಿಂದನೆಗೆ ಅವಕಾಶವಿರಬಾರದು.  ಅರ್ಷ್ ದೀಪ್ ನೀನು ಕಠಿಣ ಪರಿಶ್ರಮ ಪಡು, ನಿನ್ನನ್ನು ನಿಂದಿಸಿದವರಿಗೆ ಮೈದಾನದಲ್ಲೇ ಪ್ರದರ್ಶನದ ಮೂಲಕ ಉತ್ತರ ಕೊಡು’ ಎಂದಿದ್ದಾರೆ ಸಚಿನ್.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಹೇಳಿಕೆಗೆ ಬಿಸಿಸಿಐ, ಸುನಿಲ್ ಗವಾಸ್ಕರ್ ಗರಂ!