Publish Date: Wed, 07 Nov 2018 (09:27 IST)
Updated Date: Wed, 07 Nov 2018 (09:28 IST)
ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಲಕ್ನೋದ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇಬ್ಬರೂ ದಿಗ್ಗಜರು ಕ್ರಿಕೆಟ್ ವೀಕ್ಷಕ ವಿವರಣೆ ನೀಡಲು ಕಾಮೆಂಟರಿ ಬಾಕ್ಸ್ ನ ಒಳಗೆ ಹೋಗುವ ಕೆಲವೇ ಸೆಕೆಂಡುಗಳ ಮೊದಲು ಅಲ್ಲಿನ ಗಾಜು ಒಡೆದು ಬಿದ್ದಿದೆ. ಅರೆಕ್ಷಣ ಮೊದಲು ಹೋಗಿದ್ದರೂ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ಗೆ ಗಾಯವಾಗುತ್ತಿತ್ತು.
ಹಲವು ದಿನಗಳ ನಂತರ ಈ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಒಂದು ವೇಳೆ ದುರ್ಘಟನೆ ನಡೆದಿದ್ದರೆ ಇದು ಮೈದಾನದ ಸಿಬ್ಬಂದಿಗೆ ಮುಜುಗರವುಂಟು ಮಾಡುವ ವಿಚಾರವಾಗುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.