ಪಾಕಿಸ್ತಾನವೇ ಏಷ್ಯಾ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಭಾರತೀಯ ಕ್ರಿಕೆಟಿಗ

ಬುಧವಾರ, 19 ಸೆಪ್ಟಂಬರ್ 2018 (09:05 IST)
ದುಬೈ: ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಏಷ್ಯಾ ಕಪ್‍ ಲೀಗ್ ಪಂದ್ಯ ನಡೆಯಲಿದೆ. ಆದರೆ ಅದಕ್ಕೂ ಮೊದಲು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪಾಕಿಸ್ತಾನವೇ ಈ ಬಾರಿಯ ಚಾಂಪಿಯನ್ ಆಗುವ ಫೇವರಿಟ್ ಎಂದಿದ್ದಾರೆ.

ಯುಎಇ ಎಂದರೆ ಪಾಕಿಸ್ತಾನಕ್ಕೆ ಎರಡನೇ ತವರು ಇದ್ದಂತೆ. ಇಲ್ಲಿನ ಪರಿಸ್ಥಿತಿ ಅವರಿಗೆ ಚೆನ್ನಾಗಿ ಗೊತ್ತು. ಭಾರತ ಪ್ರಬಲ ಎದುರಾಳಿ ಇರಬಹುದು. ಆದರೆ ಕಪ್ ಗೆಲ್ಲುವ ಫೇವರಿಟ್ ಪಾಕಿಸ್ತಾನ ಎಂದು ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದು ಭಾರತ ತಂಡದ ಪ್ರಮುಖ ಬಲ ಕಳೆದುಕೊಂಡಂತೆ. ಪಾಕಿಸ್ತಾನ ಕಳೆದ ಕೆಲವು ಸಮಯಗಳಿಂದ ದುಬೈನಲ್ಲಿ ಆಡುತ್ತಿದ್ದಂತೆ. ಹಾಗಾಗಿ ಅವರಿಗೆ ಇಲ್ಲಿ ಹೇಗೆ ಆಡಬೇಕೆಂದು ಚೆನ್ನಾಗಿ ಗೊತ್ತು ಎಂದು ಕಾಮೆಂಟೇಟರ್ ಕೂಡಾ ಆಗಿರುವ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕನ್ನಡಿಗ ಆಟಗಾರರಿಲ್ಲದೇ ಆಡಿದ ಟೀಂ ಇಂಡಿಯಾ