Publish Date: Tue, 18 Sep 2018 (16:37 IST)
Updated Date: Tue, 18 Sep 2018 (16:39 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ಎದುರಿಸುತ್ತಿದ್ದು ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭವಾಗಲಿದೆ.
ಟಾಸ್ ಗೆದ್ದ ಹಾಂಗ್ ಕಾಂಗ್ ನಾಯಕ ಅಂಶುಮಾನ್ ರಾಥ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಹಾಂಗ್ ಕಾಂಗ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕದಿನ ಪಂದ್ಯವಾಡುತ್ತಿದೆ. ಹಾಗಾಗಿ ಟೀಂ ಇಂಡಿಯಾ ಪಾಲಿಗೆ ಇದು ದರ್ಬಲ ಎದುರಾಳಿ.
ಈ ಪಂದ್ಯದ ಮೂಲಕ ಟೀಂ ಇಂಡಿಯಾ ಪರ ಯುವ ಕ್ರಿಕೆಟಿಗ ಖಲೀಲ್ ಮೊಹಮ್ಮದ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಳೆ ಪಾಕಿಸ್ತಾನದ ವಿರುದ್ಧ ಮಹತ್ವದ ಪಂದ್ಯಕ್ಕೆ ಮೊದಲು ಭಾರತಕ್ಕೆ ಇದು ಅಭ್ಯಾಸ ನಡೆಸಲು ವೇದಿಕೆ ಸಿಕ್ಕಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.