ಹೈದರಾಬಾದ್ ಬಿಟ್ಟು ಶಿಖರ್ ಧವನ್ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದರ ಕಾರಣವೇನು ಗೊತ್ತಾ?

ಬುಧವಾರ, 7 ನವೆಂಬರ್ 2018 (09:03 IST)
ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮುಂಬರುವ ಐಪಿಎಲ್ ಸೀಸನ್ ನಿಂದ ತಮ್ಮ ತವರು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದುವರೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಶಿಖರ್ ಧವನ್ ರನ್ನು ಡೆಲ್ಲಿ ತಂಡಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಇದಕ್ಕೆ ಕಾರಣ ವೇತನ ಸಮಸ್ಯೆ ಎನ್ನಲಾಗಿದೆ.

ಶಿಖರ್ ಧವನ್‍ ರನ್ನು ಖರೀದಿಸಿ ಮೊತ್ತದಷ್ಟು ವೇತನವನ್ನು ಹೈದರಾಬಾದ್ ಆರ್ಥಿಕ ಸಮಸ್ಯೆಯಿಂದಾಗಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಶಿಖರ್ ಹೈದರಾಬಾದ್ ಬಿಟ್ಟು ಡೆಲ್ಲಿ ತಂಡ ಕೂಡಿಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ. ಇದೀಗ ಧವನ್ ರನ್ನು ಬಿಟ್ಟುಕೊಟ್ಟು ಹೈದರಾಬಾದ್ ಡೆಲ್ಲಿ ತಂಡದ ಮೂವರು ಆಟಗಾರರನ್ನು ಖರೀದಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಪಂದ್ಯಾರಂಭಕ್ಕೂ ಮುನ್ನ ಮೈದಾನದಲ್ಲಿ ಈ ಬದಲಾವಣೆ ಮಾಡಿದ ಯುಪಿ ಸರ್ಕಾರ