Publish Date: Mon, 22 Jun 2020 (09:07 IST)
Updated Date: Mon, 22 Jun 2020 (09:09 IST)
ಮುಂಬೈ: ಮಾಜಿ ಅಂಪಾಯರ್ ಸ್ಟೀವ್ ಬಕ್ನರ್ ಎಂದರೆ ಭಾರತೀಯ ಅಭಿಮಾನಿಗಳಿಗೆ ಆಕ್ರೋಶವಿತ್ತು. ಇದಕ್ಕೆ ಕಾರಣ ಅವರು ಭಾರತೀಯ ಆಟಗಾರರಿಗೆ ಅದರಲ್ಲೂ ವಿಶೇಷವಾಗಿ ಸಚಿನ್ ತೆಂಡುಲ್ಕ್ ಗೆ ಹಲವು ಬಾರಿ ನಾಟೌಟ್ ಆಗಿದ್ದರೂ ಔಟ್ ಎಂದು ವಿವಾದಾತ್ಮಕ ತೀರ್ಪು ನೀಡುತ್ತಿದ್ದುದು.
ಆದರೆ ಬಕ್ನರ್ ಇದೀಗ ಅಂದು ಮಾಡಿದ ತಪ್ಪನ್ನು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಗೆ ನಾನು ಎರಡು ಬಾರಿ ತಪ್ಪಾಗಿ ಔಟ್ ತೀರ್ಪು ನೀಡಿದ್ದೆ ಎಂದಿದ್ದಾರೆ.
‘ಒಮ್ಮೆ ಆಸ್ಟ್ರೇಲಿಯಾದಲ್ಲಿ, ಇನ್ನೊಮ್ಮೆ ಭಾರತದಲ್ಲೇ ಸಚಿನ್ ನಾಟೌಟ್ ಆಗಿದ್ದರೂ ನನ್ನ ಕಣ್ತಪ್ಪಿನಿಂದ ಔಟ್ ಎಂದು ತೀರ್ಪು ನೀಡಿದ್ದೆ. ಆದರೆ ಮಾನವರಾಗಿ ತಪ್ಪು ಮಾಡುವುದು ಸಹಜ. ಹಾಗಿದ್ದರೂ ಆ ತಪ್ಪುಗಳಿಗೆ ನಾನು ಈಗಲೂ ಪಶ್ಚಾತ್ತಾಪ ಪಡುತ್ತೆನೆ’ ಎಂದು ಬಕ್ನರ್ ಹೇಳಿಕೊಂಡಿದ್ದಾರೆ.