Publish Date: Sat, 20 Jun 2020 (07:59 IST)
Updated Date: Sat, 20 Jun 2020 (08:01 IST)
ಮುಂಬೈ: ಭಾರತ-ಚೀನಾ ಗಡಿಯಲ್ಲಿ ಸೇನೆಗಳ ನಡುವೆ ಘರ್ಷಣೆಯಾದ ಬೆನ್ನಲ್ಲೇ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗಿದೆ. ಈ ನಡುವೆ ಬಿಸಿಸಿಐ ಕೂಡಾ ಐಪಿಎಲ್ ಪ್ರಾಯೋಜಕತ್ವ ಬದಲಿಸುವ ಚಿಂತನೆ ನಡೆಸಿದೆ.
ಐಪಿಎಲ್ ಗೆ ಚೀನಾ ಮೂಲದ ಕಂಪನಿ ವಿವೋ ಪ್ರಾಯೋಜಕತ್ವ ವಹಿಸಿದೆ. ಈಗ ಐಪಿಎಲ್ ಪ್ರಾಯೋಜಕತ್ವ ಬದಲಾಯಿಸದೇ ಇದ್ದಲ್ಲಿ ಅಭಿಮಾನಿಗಳ ಆಕ್ರೋಶ ಹೆಚ್ಚಾಗಲಿದೆ. ಹೀಗಾಗಿ ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಪ್ರಾಯೋಜಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸಲಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಮ್ಮದೇ ದುಡ್ಡನ್ನು ಚೀನಾ ಕಂಪನಿ ಜೇಬಿಗಿಳಿಸಿಕೊಂಡು ಪರೋಕ್ಷವಾಗಿ ನಮ್ಮನ್ನು ಕೊಳ್ಳೆ ಹೊಡೆದಂತೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.