Select Your Language

Notifications

webdunia
webdunia
webdunia
webdunia

ಸೇನೆಗೆ ಯಾಕೆ ಶಸ್ತ್ರಾಸ್ತ್ರ ಕೊಡಲಿಲ್ಲ ಎಂದು ಪ್ರಶ್ನಿಸಿ ತಾವೇ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ

ಸೇನೆಗೆ ಯಾಕೆ ಶಸ್ತ್ರಾಸ್ತ್ರ ಕೊಡಲಿಲ್ಲ ಎಂದು ಪ್ರಶ್ನಿಸಿ ತಾವೇ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 19 ಜೂನ್ 2020 (09:24 IST)
ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆದಾಗ ಯೋಧರ ರಕ್ಷಣೆಗೆ ಶಸ್ತ್ರಾಸ್ತ್ರ ನೀಡಿರಲಿಲ್ಲ ಯಾಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ಹೋಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವೇ ಇಕ್ಕಟ್ಟಿಗೆ ಸಿಲುಕಿದ್ದಾರೆ.


ಅಸಲಿಗೆ ಭಾರತ-ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಕೊಂಡೊಯ್ಯುವುದಕ್ಕೆ ಸಮಸ್ಯೆಯಿಲ್ಲ. ಆದರೆ ಅದನ್ನು ಬಳಸುವುದಕ್ಕೆ ಕೆಲವು ಶಾಂತಿ ಒಪ್ಪಂದಗಳು ಅಡ್ಡಿಯಾಗುತ್ತವೆ. 1996 ಮತ್ತು 2005 ರಲ್ಲಿ ಉಭಯ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದದ ಪರಿಣಾಮ ಇಲ್ಲಿ ಗುಂಡಿನ ಕಾಳಗ ನಡೆದಿಲ್ಲ.

ಹೀಗಾಗಿ ರಾಹುಲ್ ಗಾಂಧಿ ಟ್ವೀಟ್ ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದಕ್ಕೆ ನಿಮ್ಮ ಹಿಂದಿನ ಸರ್ಕಾರದ ಒಪ್ಪಂದವೇ ಕಾರಣವಾಗಿತ್ತು ಎಂದು ಹಲವರು ತಿರುಗೇಟು ನೀಡಿದ್ದಾರೆ. ರಾಹುಲ್ ಟೀಕೆಯ ಬಳಿಕ ವಿದೇಶಾಂಗ ಸಚಿವ ಜೈಶಂಕರ್ ಕೂಡಾ ಸ್ಪಷ್ಟನೆ ನೀಡಿದ್ದು, ಯೋಧರ ಕೈಗೆ ಶಸ್ತ್ರಾಸ್ತ್ರ ನೀಡಲಾಗಿತ್ತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಚೀನಾ ಗಡಿಯಲ್ಲಿ ಸೇನೆ ಶಸ್ತ್ರಾಸ್ತ್ರ ಪ್ರಯೋಗಿಸುವುದಿಲ್ಲ ಯಾಕೆ ಗೊತ್ತಾ?