Select Your Language

Notifications

webdunia
webdunia
webdunia
webdunia

ಸಂಪೂರ್ಣ ಸುರಕ್ಷವಾಗುವವರೆಗೂ ಟೀಂ ಇಂಡಿಯಾಗೆ ತರಬೇತಿ ಇಲ್ಲ

ಸಂಪೂರ್ಣ ಸುರಕ್ಷವಾಗುವವರೆಗೂ ಟೀಂ ಇಂಡಿಯಾಗೆ ತರಬೇತಿ ಇಲ್ಲ
ಮುಂಬೈ , ಶನಿವಾರ, 20 ಜೂನ್ 2020 (09:13 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಮೈದಾನಕ್ಕಿಳಿಯದೇ ತಿಂಗಳುಗಳೇ ಕಳೆದಿವೆ. ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿದ್ಧವಾಗಬೇಕಾದರೆ ಕ್ರಿಕೆಟಿಗರಿಗೆ ಸುದೀರ್ಘ ತರಬೇತಿ ಅವಧಿ ಬೇಕಾಗುತ್ತದೆ.


ಕೊರೋನಾ, ಲಾಕ್ ಡೌನ್ ಒಂದು ಹದಕ್ಕೆ ಬಂದ ಮೇಲೆ ಆಟಗಾರರಿಗೆ ತರಬೇತಿ ಶಿಬಿರ ಆಯೋಜಿಸುವುದಾಗಿ ಬಿಸಿಸಿಐ ಈ ಮೊದಲು ಹೇಳಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬಿಸಿಸಿಐ ಅವಸರದ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.

ಲಾಕ್ ಡೌನ್ ಸಡಿಲಿಕೆಯಾಗಿ ಖಾಲಿ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅನುಮತಿ ಸಿಕ್ಕರೂ ಕೊರೋನಾ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಬಿಸಿಸಿಐ ಟೀಂ ಇಂಡಿಯಾ ಆಟಗಾರರನ್ನು ಅಪಾಯಕ್ಕೆ ದೂಡದೇ ಇರಲು ತೀರ್ಮಾನಿಸಿದೆ. ಹೀಗಾಗಿ ಸದ್ಯಕ್ಕೆ ತರಬೇತಿ ಶಿಬಿರ ಆಯೋಜಿಸುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಚೀನಾ ಗಡಿ ಸಂಘರ್ಷ ಹಿನ್ನಲೆ: ಐಪಿಎಲ್ ಪ್ರಾಯೋಜಕತ್ವ ಬದಲು?!