Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಆಯೋಜಿಸಲು ಆಸ್ಟ್ರೇಲಿಯಾಗೇ ಮನಸ್ಸಿಲ್ಲ ಎಂದ ಬಿಸಿಸಿಐ

ಟಿ20 ವಿಶ್ವಕಪ್ ಆಯೋಜಿಸಲು ಆಸ್ಟ್ರೇಲಿಯಾಗೇ ಮನಸ್ಸಿಲ್ಲ ಎಂದ ಬಿಸಿಸಿಐ
ಮುಂಬೈ , ಗುರುವಾರ, 18 ಜೂನ್ 2020 (09:28 IST)
ಮುಂಬೈ: ಟಿ20 ವಿಶ್ವಕಪ್ ರದ್ದುಗೊಳಿಸಿ ಆ ಸಮಯದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಒತ್ತಡ ಹೇರುತ್ತಿದೆ ಎಂಬ ಆರೋಪಗಳಿಗೆ ಖಜಾಂಜಿ ಅರುಣ್ ಧಮಾಲ್ ಪ್ರತಿಕ್ರಿಯಿಸಿದ್ದಾರೆ.


ಅಕ್ಟೋಬರ್-ನವಂಬರ್ ವೇಳೆ ನಡೆಯಬೇಕಿರುವ ಟಿ20 ವಿಶ್ವಕಪ್ ಆಯೋಜಿಸಲು ಅತಿಥೇಯ ಆಸ್ಟ್ರೇಲಿಯಾಗೇ ಮನಸ್ಸಿಲ್ಲ. ಹೀಗಿರುವಾಗ ಐಸಿಸಿ ಏನು ಮಾಡಲು ಸಾಧ‍್ಯ ಎಂದು ಅವರು ಪ್ರಶ್ನಿಸಿದ್ದಾರೆ.

‘ಆತಿಥ್ಯ ವಹಿಸುತ್ತಿರುವ ಆಸ್ಟ್ರೇಲಿಯಾ ಹಿಂದೇಟು ಹಾಕುತ್ತಿದೆ. ಹೀಗಿರುವಾಗ ಐಸಿಸಿ ಏನು ಮಾಡಲು ಸಾಧ‍್ಯವಿಲ್ಲ. ಹಾಗಿದ್ದರೂ ಈ ವಿಚಾರದಲ್ಲಿ ಘೋಷಣೆ ಮಾಡಲು ಐಸಿಸಿ ಯಾಕೆ ಹಿಂದೇಟು ಹಾಕುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ’ ಎಂದು ಅರುಣ್ ಹೇಳಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ರದ್ದು ಮಾಡುವ ಘೋಷಣೆ ಮಾಡಿದ ತಕ್ಷಣವೇ ಆ ಸಮಯದಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ಘೋಷಣೆ ಮಾಡಲು ಬಿಸಿಸಿಐ ಕಾದು ಕುಳಿತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಜುವೇಂದ್ರ ಚಾಹಲ್ ಜತೆಗಿನ ಗೆಳೆತನದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ವ್ಯಾಟ್ ಹೇಳಿದ್ದು ಹೀಗೆ!