ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಜತೆಗೆ ಆಗಾಗ ಫನ್ನಿ ಕಾಮೆಂಟ್ ಮಾಡುತ್ತಿರುತ್ತಾರೆ.
ಹೀಗಾಗಿ ಇವರಿಬ್ಬರ ಗೆಳೆತನ ಯಾವ ಮಟ್ಟದ್ದು ಎಂಬುದು ಎಲ್ಲರಿಗೂ ಕುತೂಹಲವಾಗಿದೆ. ಈ ಬಗ್ಗೆ ಸ್ವತಃ ವ್ಯಾಟ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
‘ನಾನು, ಚಾಹಲ್ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಫಾಲೋ ಮಾಡುತ್ತೇವೆ. ಇಬ್ಬರೂ ಕಾಮೆಂಟ್ ಮಾಡಿಕೊಳ್ಳುತ್ತೇವೆ, ಒಬ್ಬರು ಮತ್ತೊಬ್ಬರ ಕಾಲೆಳೆದುಕೊಳ್ಳುತ್ತೇವೆ. ಹೀಗಾಗಿ ಉತ್ತಮ ಸ್ನೇಹಿತರಾಗಿದ್ದೇವೆ. ಆದರೆ ಒಂದು ದಿನವೂ ನಾವಿಬ್ಬರೂ ಮುಖಾಮಖಿಯಾಗಿಲ್ಲ’ ಎಂದು ವ್ಯಾಟ್ ಹೇಳಿಕೊಂಡಿದ್ದಾರೆ.