Publish Date: Thu, 18 Jun 2020 (09:40 IST)
Updated Date: Thu, 18 Jun 2020 (09:42 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ತಮ್ಮ ಹಳ್ಳಿಯ ಜನರಿಗೆ ಮನೆ ಕಟ್ಟಲು ನೆರವಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲಾಕ್ ಡೌನ್ ನಿಂದಾಗಿ ತಮ್ಮ ಊರು ಮಾಂಡ್ವಾದ ಗ್ರಾಮವೊಂದರಲ್ಲಿ ಬಾಕಿಯಾಗಿರುವ ಪೃಥ್ವಿ ಶಾ ಅಲ್ಲಿನ ಬಡ ಜನರಿಗೆ ಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಸಂಭವಿಸಿ ಚಂಡಮಾರುತದಿಂದಾಗಿ ಗ್ರಾಮಸ್ಥರು ಅನೇಕರು ಮನೆ, ಮಠ ಕಳೆದುಕೊಂಡಿದ್ದಾರೆ. ಈ ಬಡ ಜನರಿಗೆ ಮನೆ ಕಟ್ಟಲು ಪೃಥ್ವಿ ಶಾ ಆರ್ಥಿಕವಾಗಿ ನೆರವಾಗಿದ್ದಾರೆ.