Publish Date: Tue, 16 Jun 2020 (09:42 IST)
Updated Date: Tue, 16 Jun 2020 (09:44 IST)
ಮುಂಬೈ: ಕೊರೋನಾದಿಂದಾಗಿ ಸದ್ಯಕ್ಕೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತುಂಬಿಕೊಂಡು ಕ್ರೀಡಾ ಕೂಟ ಆಯೋಜಿಸುವುದು ಕಷ್ಟದ ಮಾತು. ಹಾಗಾಗಿ ಖಾಲಿ ಮೈದಾನದಲ್ಲಿ ಕ್ರಿಕೆಟ್ ನಡೆಯಲಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ.
ಆದರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಇದನ್ನು ವಿರೋಧಿಸಿದ್ದಾರೆ. ಖಾಲಿ ಮೈದಾನದಲ್ಲಿ ಕ್ರಿಕೆಟ್ ನಡೆಸುವುದೂ ಒಂದೇ, ಅತಿಥಿಗಳಿಲ್ಲದೇ ಮದುವೆ ಮಾಡುವುದೂ ಒಂದೇ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
‘ಖಾಲಿ ಮೈದಾನದಲ್ಲಿ ಕ್ರಿಕೆಟ್ ನಡೆದರೆ ಮಜಾ ಇರದು. ಬ್ಯಾಟ್ಸ್ ಮನ್ ಸಿಕ್ಸರ್, ಬೌಂಡರಿ ಬಾರಿಸುವಾಗ ಪ್ರೇಕ್ಷಕರ ಗದ್ದಲವಿದ್ದರೇ ಆಟದಲ್ಲಿ ಮಜಾ ಇರುವುದು’ ಎಂದು ಪಠಾಣ‍್ ಹೇಳಿಕೊಂಡಿದ್ದಾರೆ.