ನವದೆಹಲಿ: ಪಾಲಾಶ್ ಮುಚ್ಚಲ್ ಜೊತೆಗೆ ಮದುವೆ ಮುರಿದುಕೊಂಡ ಮೊದಲ ಬಾರಿಗೆ ಸ್ಮೃತಿ ಮಂಧಾನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮದುವೆ ಮುರಿದ ಬಗ್ಗೆ ಒಂದೇ ಸಾಲಿನಲ್ಲಿ ಉತ್ತರಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆಗೆ ಅಮೆಝೋನ್ ಸಂಭವ್ ಸಮ್ಮೇಳನದಲ್ಲಿ ಭಾಗಿಯಾದ ಸ್ಮೃತಿ ಮಂಧಾನ ಸಂವಾದದಲ್ಲಿ ಭಾಗಿಯಾದರು. ಈ ವೇಳೆ ಮದುವೆ ಮುರಿದುಕೊಂಡ ನಂತರ ನಡೆದ ಬೆಳವಣಿಗೆ ಬಗ್ಗೆ ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನಾನು ಕ್ರಿಕೆಟ್ ಗಿಂತ ಹೆಚ್ಚಾಗಿ ಏನನ್ನೂ ಪ್ರೀತಿಸುವುದಿಲ್ಲ. ಭಾರತ ತಂಡದ ಜೆರ್ಸಿ ತೊಡುವುದು ನನಗೆ ತುಂಬಾ ಖುಷಿ ಕೊಡುತ್ತದೆ ಮತ್ತು ಜೀವನದ ಎಲ್ಲಾ ಸಮಸ್ಯೆಗಳನ್ನು ಮರೆಸುತ್ತದೆ ಎಂದಿದ್ದಾರೆ.
ಈ ಮೂಲಕ ತಮ್ಮ ವೈಯಕ್ತಿಕ ಜೀವನದಲ್ಲಿ ಇತ್ತೀಚೆಗೆ ನಡೆದ ಘಟನೆಗಳೂ ತಮ್ಮನ್ನು ವಿಚಲಿತರನ್ನಾಗಿ ಮಾಡಿಲ್ಲ ಎಂದಿದ್ದಾರೆ. ಮದುವೆ ಮುರಿದುಕೊಂಡ ಇದೇ ಮೊದಲ ಬಾರಿಗೆ ಸ್ಮೃತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.