ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆಗೆ ನಡೆಯಬೇಕಿದ್ದ ಮದುವೆ ರದ್ದಾದ ಬಳಿಕ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಅವರು ಮೊದಲ ಭಾರೀ ಇಂದು ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಪಲಾಶ್ ಮುಚ್ಚಲ್ ಜತೆಗೆ ಸ್ಮೃತಿ ಅವರ ಮದುವೆ ಈ ವರ್ಷದ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಸ್ಮೃತಿಯ ತಂದೆ ಆಸ್ಪತ್ರೆಗೆ ದಾಖಲಾದ ನಂತರ ಅವರ ಮದುವೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಬಳಿಕ ಮುಚ್ಚಲ್ ಅವರು ಇನ್ನೊಂದು ಯುವತಿ ಜತೆ ಪ್ರಣಯದಿಂದ ಮಾತನಾಡಿರುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೇ ಕಾರಣಕ್ಕೆ ಮದುವೆ ಮುಂದೂಡಲಾಯಿತು ಎಂಬ ವದಂತಿ ಹಬ್ಬಿತು. ಆದರೆ ಕಾರಣ ಹೇಳದೆ ಪಲಾಶ್ ಜತೆಗಿನ ಮದುವೆ ರದ್ದುಗೊಳಿಸಿರುವುದಾಗಿ ಹೇಳಿಕೊಂಡಿದ್ದರು.
ಇದೀಗ ಮದುವೆ ರದ್ದಾಗಿ ಎರಡು ವಾರಗಳ ನಂತರ, ಇಂದು ಸ್ಮೃತಿ ಮೊದಲ ಸಾರ್ವಜನಿಕವಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಮದುವೆ ಸ್ಥಗಿತಗೊಂಡ ನಂತರ, ಪಲಾಶ್ ಮುಚ್ಚಲ್ ಅವರು ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಸಂಗೀತ ಸಂಯೋಜಕ ಪ್ರೇಮಾನಂದ್ ಜಿ ಮುಂದೆ ನೆಲದ ಮೇಲೆ ಕೈಗಳನ್ನು ಮಡಚಿ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು.
ಆದರೆ ಇಂದು ಸ್ಮೃತಿ ಮಂಧಾನ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಡೆನಿಮ್ ಜೀನ್ಸ್ ಮತ್ತು ನೀಲಿ ಸ್ವೆಟರ್ ಧರಿಸಿ, ಮುಖದ ಮೇಲೆ ಮಾಸ್ಕ್ ಹಾಕಿಕೊಂಡು ದೆಹಲಿ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಸೆರೆ ಹಿಡಿಯಲಾಯಿತು. ಅವಳು ತನ್ನ ಕಾರಿನಲ್ಲಿ ಕುಳಿತು ಓಡಿಸುವ ಮೊದಲು, ಪಾಪರಾಜಿಗಳು ಸ್ಮೃತಿಯನ್ನು ಸ್ವಾಗತಿಸಿದರು, ಆದರೆ ಸ್ಮೃತಿ ಯಾವುದೇ ಸನ್ನೆ ಮಾಡದೆ ಕಾರು ಹತ್ತಿದರು.