ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಜಯ್ ಹಜಾರೆ ಟ್ರೋಫಿ ಆಡಬಹುದು ಎಂಬ ವದಂತಿಗಳಿವೆ. ಅವರು ಒಂದು ಪಂದ್ಯ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?
ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ. ಸದ್ಯಕ್ಕೆ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದರೂ ಅವರ ಚಾರ್ಮ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆಟದಲ್ಲೂ ಅದೇ ಖದರ್ ಇದೆ. ಹಾಗಿದ್ದರೂ ಮುಂದಿನ ಸರಣಿ ಆಡುವ ಮೊದಲು ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ಆಡಬಹುದು ಎಂಬ ಸುದ್ದಿಗಳಿತ್ತು.
ಇದು ಇನ್ನೂ ಖಚಿತವಾಗಿಲ್ಲ. ಹಾಗಿದ್ದರೂ ಅವರು ಒಂದು ವೇಳೆ ಆಡಿದರೂ ಅವರಿಗೆ ಒಂದು ಪಂದ್ಯಕ್ಕೆ ಸಿಗುವ ಸಂಭಾವನೆ ಕೇವಲ 50,000 ರೂ. ವಿರಾಟ್ ಕೊಹ್ಲಿ ಹೇಳಿ ಕೇಳಿ ಕೋಟ್ಯಾಂತರ ರೂಪಾಯಿಗಳ ಒಡೆಯ. ಅವರು ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದರೆ 5 ಕೋಟಿ ರೂ.ಗಳಷ್ಟು ದುಡಿಯುತ್ತಾರೆ.
ಆದರೆ ದೇಶೀಯ ಕ್ರಿಕೆಟ್ ನಲ್ಲಿ ಆಡುವುದರಿಂದ ಅವರಿಗೆ ಸಿಗುವ ಸಂಭಾವನೆ ಪಾಕೆಟ್ ಮನಿಯಷ್ಟೂ ಅಲ್ಲ. ಹಾಗಿದ್ದರೂ ಸಂಭಾವನೆ ಇಲ್ಲಿ ಲೆಕ್ಕಕ್ಕೆ ಬರಲ್ಲ. ಒಂದು ವೇಳೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕು ಎಂದರೆ ಅವರು ಆಡಲೇಬೇಕಾಗುತ್ತದೆ.