Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

Rohit Sharma, Virat Kohli
ಮುಂಬೈ: ಏಕದಿನ ಫಾರ್ಮ್ಯಾಟ್ ಮಾತ್ರ ಆಡುತ್ತಿರುವ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಂದ್ಯ ನೋಡುವುದಕ್ಕಾಗಿ ಅಭಿಮಾನಿಗಳು ಕಾದಿರುತ್ತಾರೆ. ರೋ ಕೊ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ನೋಡಿ ಡೀಟೈಲ್ಸ್.

ರೋಹಿತ್ ಮತ್ತು ಕೊಹ್ಲಿ ಆಡುವ ಕಾರಣಕ್ಕೆ ಈಗ ಟೀಂ ಇಂಡಿಯಾ ಆಡುವ ಏಕದಿನ ಸರಣಿಗೆ ಎಲ್ಲಿಲ್ಲದ ಬೇಡಿಕೆಯಿರುತ್ತದೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಇವರಿಬ್ಬರು ಇಲ್ಲದ ಕಾರಣ ಇತ್ತೀಚೆಗಿನ ದಿನಗಳಲ್ಲಿ ಪಂದ್ಯ ವೀಕ್ಷಿಸುವವರೇ ಇಲ್ಲದಂತಾಗಿದೆ.

ಮೊನ್ನೆಯಷ್ಟೇ ಮುಗಿದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಬಳಿಕ ರೋ ಕೊ ಆಡುವ ಮುಂದಿನ ಪಂದ್ಯ ಯಾವುದು ಎಂದು ಕಾಯುತ್ತಿದ್ದವರಿಗೆ ಉತ್ತರ ಸಿಕ್ಕಿದೆ. ಟೀಂ ಇಂಡಿಯಾ ಪರ ಈ ಇಬ್ಬರು ಮುಂದಿನ ಬಾರಿ ಕಣಕ್ಕಿಳಿಯುವುದು ಜನವರಿ 2026 ರಲ್ಲಿ.

ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಿದೆ. ಇದೂ ತವರಿನಲ್ಲೇ ನಡೆಯುವ ಪಂದ್ಯಗಳು. ಜನವರಿ 11 ರಿಂದ ಆರಂಭವಾಗಿ ಜನವರಿ 18 ರವರೆಗೆ ಈ ಸರಣಿ ನಡೆಯಲಿದೆ. ಅಂದರೆ ಇವರಿಬ್ಬರ ಆಟ ನೋಡಲು ಇನ್ನು ಒಂದು ತಿಂಗಳು ಕಾಯಬೇಕು. ಅದಕ್ಕಿಂತ ಮೊದಲು ರೋಹಿತ್-ಕೊಹ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಸಾಧ್ಯತೆಯಿದೆ. ಆದರೆ ರಾಷ್ಟ್ರೀಯ ತಂಡದ ಪರ ಆಡುವುದನ್ನು ನೋಡಲು 1 ತಿಂಗಳು ಕಾಯಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಇಂದಿನಿಂದ ಟಿ20 ಸರಣಿ, ಅದೊಂದು ದಾಖಲೆಯಾಗದಿದ್ರೆ ಸಾಕಪ್ಪಾ..