Publish Date: Mon, 08 Jan 2024 (13:27 IST)
Updated Date: Mon, 08 Jan 2024 (13:27 IST)
ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ನಿನ್ನೆ ನಡೆದ ಬಾಂಗ್ಲಾ ಸಾರ್ವತ್ರಿಕ ಚುನಾವಣೆಯಲ್ಲಿ ಶಕೀಬ್ ಆಡಳಿತಾರೂಢ ಹವಾಮಿ ಲೀಗ್ ಪಕ್ಷದಿಂದ ಸ್ಪರ್ಧಿಸಿ 1,50,000 ಅಂತರದಿಂದ ಗೆಲುವು ಸಾಧಿಸಿದ್ದರು.
ಆದರೆ ಸಂಸದನಾಗಿ ಆಯ್ಕೆಯಾಗುತ್ತಿದ್ದಂತೇ ಶಕೀಬ್ ರನ್ನು ಅಭಿನಂದಿಸಲು ನೂರಾರು ಜನ ಮುತ್ತಿಗೆ ಹಾಕಿದ್ದರು. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ತಾಳ್ಮೆ ಕಳೆದುಕೊಂಡ ಕ್ರಿಕೆಟಿಗ ಕಮ್ ಸಂಸದ ಪಕ್ಕದಲ್ಲಿದ್ದ ಅಭಿಮಾನಿಯೊಬ್ಬರ ಕೆನ್ನೆಗೆ ಭಾರಿಸಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಶಕೀಬ್ ಅಲ್ ಹಸನ್ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.