Publish Date: Tue, 04 Apr 2023 (11:12 IST)
Updated Date: Tue, 04 Apr 2023 (11:16 IST)
ಕೋಲ್ಕೊತ್ತಾ: ಬಾಂಗ್ಲಾದೇಶ ಆಲ್ ರೌಂಡರ್, ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಶಕೀಬ್ ಅಲ್ ಹಸನ್ ಐಪಿಎಲ್ 2023 ರಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಶಕೀಬ್ ಕೆಕೆಆರ್ ಪರ ಆಡಿದ್ದರು. ಆದರೆ ಇದೀಗ ತಮ್ಮ ರಾಷ್ಟ್ರೀಯ ತಂಡದ ಪ್ರತಿನಿಧಿಸಲು ಮತ್ತು ವೈಯಕ್ತಿಕ ಕಾರಣ ನೀಡಿ ಐಪಿಎಲ್ 2023 ರಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ.
ಈಗಾಗಲೇ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಇಲ್ಲದೇ ಹಿಂದುಳಿದಿದೆ. ಇದೀಗ ಮತ್ತೊಬ್ಬ ಹಿರಿಯ ಆಟಗಾರನ ಅನುಪಸ್ಥಿತಿ ತಂಡವನ್ನು ಬಾಧಿಸಲಿದೆ.