Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಪ್ರಬಲ ಗುಜರಾತ್ ಗೆ ಡೆಲ್ಲಿ ಎದುರಾಳಿ

ಐಪಿಎಲ್ 2023: ಪ್ರಬಲ ಗುಜರಾತ್ ಗೆ ಡೆಲ್ಲಿ ಎದುರಾಳಿ
ನವದೆಹಲಿ , ಮಂಗಳವಾರ, 4 ಏಪ್ರಿಲ್ 2023 (08:50 IST)
Photo Courtesy: Twitter
ನವದೆಹಲಿ: ಐಪಿಎಲ್ 2023 ರಲ್ಲಿ ಇಂದು ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಪಂದ್ಯವಾಡುತ್ತಿದೆ.

ಗುಜರಾತ್ ಆರಂಭಿಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ ಡೆಲ್ಲಿ ತವರಿನ ಲಾಭ ಪಡೆದು ಮೊದಲ ಗೆಲುವು ದಾಖಲಿಸುವ ತವಕದಲ್ಲಿದೆ.

ಅತ್ತ ಗುಜರಾತ್ ಟೈಟನ್ಸ್ ಗೆ ಅತ್ಯುತ್ತಮ ಫಾರ್ಮ್ ನಲ್ಲಿರುವ ಶುಬ್ಮನ್ ಗಿಲ್ ಬ್ಯಾಟಿಂಗ್ ಶಕ್ತಿ. ಜೊತೆಗೆ ರಶೀದ್ ಖಾನ್, ರಾಹುಲ್ ತೆವಾತಿಯಾರಂತಹ ಪ್ರತಿಭಾವಂತರಿದ್ದಾರೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಕಳೆಗುಂದಿತ್ತು. ನಾಯಕ ಡೇವಿಡ್ ವಾರ್ನರ್ ಸಿಡಿಯಬೇಕಿದೆ. ಪೃಥ್ವಿ ಶಾ, ಮನೀಶ್ ಪಾಂಡೆ ಮುಂತಾದವರು ಖ್ಯಾತಿಗೆ  ತಕ್ಕ ಆಟವಾಡಿದರೆ ಗೆಲುವು ಸಾಧ‍್ಯ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಚೆನ್ನೈಗೆ ಮೊದಲ ಜಯ