Select Your Language

Notifications

webdunia
webdunia
webdunia
webdunia

ಐಪಿಎಲ್ 2023: ಡೆಲ್ಲಿ ವಿರುದ್ಧ ಲಕ್ನೋಗೆ ಭರ್ಜರಿ ಜಯ

ಐಪಿಎಲ್ 2023: ಡೆಲ್ಲಿ ವಿರುದ್ಧ ಲಕ್ನೋಗೆ ಭರ್ಜರಿ ಜಯ
ಲಕ್ನೋ , ಭಾನುವಾರ, 2 ಏಪ್ರಿಲ್ 2023 (08:40 IST)
ಲಕ್ನೋ: ಐಪಿಎಲ್ 2023 ರ ಶನಿವಾರದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 50 ರನ್ ಗಳ ಭರ್ಜರಿ ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಪಡೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಮೇಯರ್ಸ್ 73 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಡೇವಿಡ್ ವಾರ್ನರ್ 56, ರಿಲೀ ರೋಸೌ 30 ರನ್ ಗಳ ಕೊಡುಗೆ ನೀಡಿದರು. ಲಕ್ನೋ ಪರ ಮಾರಕ ದಾಳಿ ಸಂಘಟಿಸಿದ ಮಾರ್ಕ್ ವುಡ್ 5 ವಿಕೆಟ್ ಗಳ ಗೊಂಚಲು ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಪಂಜಾಬ್ ಗೆ ಮೊದಲ ಜಯದ ಸಿಹಿ