Select Your Language

Notifications

webdunia
webdunia
webdunia
webdunia

ಪದೇ ಪದೇ ಬುಮ್ರಾ ಅಂದಿದ್ದಕ್ಕೆ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ

ಜಸ್ಪ್ರೀತ್ ಬುಮ್ರಾ
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ 2023 ರ ಮೊದಲ ಪಂದ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ಗೆ ಸೋಲಾಗಿತ್ತು.

ಈ ಸೋಲಿನ ಬಳಿಕ ಮತ್ತೆ ರೋಹಿತ್ ಶರ್ಮಾಗೆ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಬಗ್ಗೆ ಪ್ರಶ್ನೆ ಎದುರಾಗಿದೆ. ಟೀಂ ಇಂಡಿಯಾ ನಾಯಕರಾಗಿರುವಾಗಲೂ ರೋಹಿತ್ ಗೆ ಪದೇ ಪದೇ ಇದೇ ಪ್ರಶ್ನೆ ಎದುರಾಗುತ್ತದೆ.

ಇದೀಗ ಮುಂಬೈಗೆ ಮೊದಲ ಸೋಲಾದಗಲೇ ಬುಮ್ರಾ ಅನುಪಸ್ಥಿತಿ ನಿಮಗೆ ಕಾಡುತ್ತಿದೆಯಾ ಎಂದು ಪ್ರಶ್ನಿಸಿದಾಗ ರೋಹಿತ್ ತಾಳ್ಮೆ ಕಳೆದುಕೊಂಡಿದ್ದಾರೆ. ‘ಬುಮ್ರಾ ಇಲ್ಲದೇ ಆಡುವುದು ನನಗೆ ಅಭ್ಯಾಸವಾಗಿದೆ’ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಪದೇ ಪದೇ ಸಂದರ್ಶಕರು ಸೋತಾಗಲೆಲ್ಲಾ ಬುಮ್ರಾ ಹೆಸರು ಹೇಳುವುದು ರೋಹಿತ್ ಗೆ ಕಿರಿ ಕಿರಿ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಪ್ರಬಲ ಗುಜರಾತ್ ಗೆ ಡೆಲ್ಲಿ ಎದುರಾಳಿ