Select Your Language

Notifications

webdunia
webdunia
webdunia
webdunia

ಫೀಲ್ಡಿಂಗ್ ಮಾಡಲು ಹೋಗಿ ಔಟಾದ ಬಾಂಗ್ಲಾ ಬ್ಯಾಟಿಗ ಮುಷ್ಫಿಕರ್ ರಹೀಂ

ಫೀಲ್ಡಿಂಗ್ ಮಾಡಲು ಹೋಗಿ ಔಟಾದ ಬಾಂಗ್ಲಾ ಬ್ಯಾಟಿಗ ಮುಷ್ಫಿಕರ್ ರಹೀಂ
ಢಾಕಾ , ಬುಧವಾರ, 6 ಡಿಸೆಂಬರ್ 2023 (14:15 IST)
Photo Courtesy: Twitter
ಢಾಕಾ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟಿಗ ಮುಷ್ಫಿಕರ್ ರಹೀಂ ವಿಚಿತ್ರ ರೀತಿಯಲ್ಲಿ ಔಟಾಗಿದ್ದಾರೆ.

35 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮುಷ್ಫಿಕರ್ ಫೀಲ್ಡಿಂಗ್ ಗೆ ತಡೆ ಮಾಡಿದ ಕಾರಣಕ್ಕೆ ಎದುರಾಳಿಗಳ ಮನವಿಯಂತೆ ಔಟಾಗಿದ್ದಾರೆ.

ತಾವು ಹೊಡೆದ ಚೆಂಡನ್ನು ತಾವೇ ಫಿಲ್ಡಿಂಗ್ ಮಾಡಲು ಹೊರಟ ಮುಷ್ಫಿಕರ್ ವಿರುದ್ಧ ಕಿವೀಸ್ ಬ್ಯಾಟಿಗರು ಫೀಲ್ಡಿಂಗ್ ಗೆ ತಡೆ ಒಡ್ಡಿದ ಆಧಾರದಲ್ಲಿ ಔಟ್ ತೀರ್ಪು ನೀಡುವಂತೆ ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಅಂಪಾಯರ್ ಔಟ್ ನೀಡಿದ್ದಾರೆ. ಹೀಗಾಗಿ ಮುಷ್ಫಿಕರ್ ವಿಚಿತ್ರ ರೀತಿಯಲ್ಲಿ ಔಟಾಗುವಂತಾಗಿದೆ. ಈ ರೀತಿ ಔಟಾಗುತ್ತಿರುವ ಮೊದಲ ಬಾಂಗ್ಲಾದೇಶೀ ಬ್ಯಾಟಿಗ ಎಂಬ ಕುಖ್ಯಾತಿಗೆ ಅವರು ಒಳಗಾಗಿದ್ದಾರೆ. ಭಾರತದ ವಿರುದ್ಧ ಈ ಹಿಂದೊಮ್ಮೆ ಪಾಕ್ ನಾಯಕ ಇಂಜಮಾಮ್ ಉಲ್ ಹಕ್ ಇದೇ ರೀತಿ ತಪ್ಪು ಮಾಡಿ ಔಟಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

INDvsSA: ಆಫ್ರಿಕಾ ಸವಾರಿ ಹೊರಟ ಟೀಂ ಇಂಡಿಯಾ