ದುಬೈ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ನಲ್ಲಿ ಪಾಕಿಸ್ತಾನ 23 ರನ್ ಗಳ ಸೋಲು ಅನುಭವಿಸಿ ಪ್ರಶಸ್ತಿ ಕಳೆದುಕೊಂಡಿದೆ.
ಈ ಸೋಲಿನ ಹೊಣೆಯನ್ನು ಪಾಕ್ ಆಲ್ ರೌಂಡರ್ ಶಹದಾಬ್ ಖಾನ್ ಹೊತ್ತುಕೊಂಡಿದ್ದಾರೆ. ಶ್ರೀಲಂಕಾ ಗೆಲುವಿಗೆ ರಾಜಪಕ್ಸೆ ಭರ್ಜರಿ ಬ್ಯಾಟಿಂಗ್ ಕಾರಣವಾಗಿತ್ತು. ಆದರೆ ರಾಜಪಕ್ಸೆ ಸೇರಿದಂತೆ ಎರಡು ಪ್ರಮುಖ ಕ್ಯಾಚ್ ಗಳನ್ನು ಶಹದಾಬ್ ಖಾನ್ ಕೈ ಚೆಲ್ಲಿದ್ದರು. ಇದು ಪಂದ್ಯಕ್ಕೆ ತಿರುವು ನೀಡಿತ್ತು. ಒಂದು ವೇಳೆ ಆ ಎರಡು ಕ್ಯಾಚ್ ಪಡೆದಿದ್ದರೆ ಲಂಕಾ ಇಷ್ಟೊಂದು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ಈ ಸೋಲಿನ ಹೊಣೆ ನನ್ನದು. ಕ್ಯಾಚ್ ನಿಂದ ಮ್ಯಾಚ್ ಗೆಲ್ಲಬಹುದು. ನಾನು ನನ್ನ ತಂಡದ ಹಿನ್ನಡೆಗೆ ಕಾರಣವಾದೆ ಎಂದು ಶಹದಾಬ್ ಟ್ವಿಟರ್ ಮೂಲಕ ಕ್ಷಮೆ ಯಾಚಿಸಿದ್ದಾರೆ.