Publish Date: Wed, 05 Jul 2023 (08:40 IST)
Updated Date: Wed, 05 Jul 2023 (08:59 IST)
ಮುಂಬೈ: ಟೀಂ ಇಂಡಿಯಾ ಕಿರು ಮಾದರಿ ಕ್ರಿಕೆಟ್ ನಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರನ್ನು ಕೈ ಬಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಇದಕ್ಕೆ ಪೂರಕವಾಗಿ ಈಗ ಹಿರಿಯ ಕ್ರಿಕೆಟಿಗರ ಭವಿಷ್ಯದ ಬಗ್ಗೆ ಆಯ್ಕೆಗಾರರು ಸದ್ಯದಲ್ಲೇ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಗೆ ಮಾತ್ರ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಟಿ20 ಸರಣಿಗೆ ತಂಡ ಆಯ್ಕೆ ತಡವಾಗಿರುವುದಕ್ಕೆ ಇದೇ ಕಾರಣ ಎನ್ನಲಾಗಿದೆ. ರೋಹಿತ್, ಕೊಹ್ಲಿಗೆ ಕೊಕ್ ಕೊಟ್ಟು ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ತಂಡ ಕಟ್ಟಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ. ಹೀಗಾದಲ್ಲಿ ರೋಹಿತ್, ಕೊಹ್ಲಿ ಅನಿವಾರ್ಯವಾಗಿ ಟಿ20 ಕ್ರಿಕೆಟ್ ನಿಂದ ನಿವೃತ್ತಿ ಪಡೆಯಬೇಕಾದೀತು.
Krishnaveni K
Publish Date: Wed, 05 Jul 2023 (08:40 IST)
Updated Date: Wed, 05 Jul 2023 (08:59 IST)