ಬೆಂಗಳೂರು: ಸ್ಯಾಫ್ ಫುಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಪ್ರಬಲ ಎದುರಾಳಿ ಕುವೈತ್ ವಿರುದ್ಧ 5-4 ಅಂತರದ ಗೆಲುವು ಸಾಧಿಸಿರುವ ಭಾರತ 9 ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಈ ಪಂದ್ಯ ಅತ್ಯಂತ ರೋಚಕವಾಗಿದ್ದು ಫುಟ್ಬಾಲ್ ಪ್ರೇಮಿಗಳನ್ನು ಕೊನೆಯವರೆಗೂ ಉಸಿರುಬಿಗಿಹಿಡಿದು ನೋಡುವಂತೆ ಮಾಡಿತು. ಮೊದಲ 90 ನಿಮಿಷಗಳಲ್ಲಿ ಎರಡೂ ತಂಡಗಳೂ 1-1 ಗೋಲು ಗಳಿಸಿದ್ದವು. ಮತ್ತೆ ಅರ್ಧ ಗಂಟೆ ಪಂದ್ಯ ವಿಸ್ತರಿಸಿದರೂ ಯಾವುದೇ ಗೋಲು ಬಾರದೇ ಇದ್ದಾಗ ಪೆನಾಲ್ಟಿ ಶೂಟೌಟ್ ಮಾಡಲಾಯಿತು.
ಮೊದಲ ಐದು ಪೆನಾಲ್ಟಿಯಲ್ಲಿ ಎರಡೂ ತಂಡಗಳು ತಲಾ 4 ಗೋಲು ಗಳಿಸಿದವು. ಆರನೇ ಅವಕಾಶದಲ್ಲಿ ಭಾರತ 1 ಗೋಲು ಗಳಿಸಿದರೆ ಕುವೈತ್ ವಿಫಲವಾಯಿತು. ಇದರಿಂದಾಗಿ ಪಂದ್ಯ ರೋಚಕವಾಗಿ ಭಾರತದ ಪಾಲಾಯಿತು. ಪೆನಾಲ್ಟಿಯಲ್ಲಿ ನಾಯಕ ಸುನಿಲ್ ಚೆಟ್ರಿ ಮೊದಲ ಗೋಲು ಗಳಿಸಿದರೆ ಸಂದೀಪ್ ಎರಡನೇ ಗೋಲು, ಛಾಂಘ್ಟೈ ಮೂರನೇ ಗೋಲು ಗಳಿಸಿದರು.