Publish Date: Sun, 02 Jul 2023 (07:50 IST)
Updated Date: Sun, 02 Jul 2023 (07:54 IST)
ಮುಂಬೈ: ಟೀಂ ಇಂಡಿಯಾಗೆ 2027 ರವರೆಗೆ ಡ್ರೀಮ್ 11 ಸಂಸ್ಥೆ ಪ್ರಾಯೋಜಕತ್ವ ವಹಿಸಲಿದೆ. ಇದನ್ನು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಬೈಜುಸ್ ಜೊತೆಗಿನ ಒಪ್ಪಂದ ಮುಗಿದ ಬಳಿಕ ಬಿಸಿಸಿಐ ಹೊಸ ಪ್ರಾಯೋಜಕರಿಗೆ ಆಹ್ವಾನ ನೀಡಿತ್ತು. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡಿಡಾಸ್ ಪ್ರಾಯೋಜಕತ್ವದ ಜೆರ್ಸಿ ಧರಿಸಿ ಟೀಂ ಇಂಡಿಯಾ ಕಣಕ್ಕಿಳಿದಿತ್ತು. ಇದೀಗ ಕೊನೆಗೂ ತಂಡಕ್ಕೆ ಖಾಯಂ ಪ್ರಾಯೋಜಕರು ಸಿಕ್ಕಿದ್ದಾರೆ.
2027 ರವರೆಗೆ ಟೀಂ ಇಂಡಿಯಾ ಕಿಟ್, ಜೆರ್ಸಿ ಎಲ್ಲದರ ಪ್ರಾಯೋಜಕತ್ವ ಡ್ರೀಮ್ 11 ನದ್ದಾಗಲಿದೆ. ಇದಕ್ಕಾಗಿ ಬಿಸಿಸಿಐ 358 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿದೆ.