ಮುಂಬೈ: ಈ ಬಾರಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಪಾಲಿಗೆ ಕೊನೆಯ ವಿಶ್ವಕಪ್ ಆಗಿರಬಹುದಾ? ಈ ಪ್ರಶ್ನೆಗೆ ವಿಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಏನು ಉತ್ತರ ಕೊಟ್ಟಿದ್ದಾರೆ ನೋಡಿ.
ಅಕ್ಟೋಬರ್ ನಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್ ನ್ನು ಕೊಹ್ಲಿಗಾಗಿ ಟೀಂ ಇಂಡಿಯಾ ಗೆಲ್ಲಲು ಪ್ರಯತ್ನಿಸಬಹುದು ಎಂದು ಇತ್ತೀಚೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದರು.
ಇದೀಗ ಆರ್ ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್ ಗೆ ಇದು ಕೊಹ್ಲಿಯ ಕೊನೆಯ ವಿಶ್ವಕಪ್ ಆಗಿರಬಹುದಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ನನಗೆ ಹಾಗನಿಸುತ್ತಿಲ್ಲ. ಕೊಹ್ಲಿಯಲ್ಲಿ ಇನ್ನೂ ಒಂದು ವಿಶ್ವಕಪ್ ಆಡುವ ಸಾಮರ್ಥ್ಯವಿದೆ. ಇದು ಅವರ ಕೊನೆಯ ವಿಶ್ವಕಪ್ ಆಗಿರಲು ಸಾಧ‍್ಯವಿಲ್ಲ ಎಂದಿದ್ದಾರೆ.