Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ಕೊಹ್ಲಿ ಆಡಲು ಬಯಸುತ್ತಿರುವ ಆ ಮೈದಾನ ಯಾವುದು ಮತ್ತು ಯಾಕೆ?

ಏಕದಿನ ವಿಶ್ವಕಪ್: ಕೊಹ್ಲಿ ಆಡಲು ಬಯಸುತ್ತಿರುವ ಆ ಮೈದಾನ ಯಾವುದು ಮತ್ತು ಯಾಕೆ?
ಮುಂಬೈ , ಬುಧವಾರ, 28 ಜೂನ್ 2023 (08:10 IST)
Photo Courtesy: Twitter

ಮುಂಬೈ: ಏಕದಿನ ವಿಶ್ವಕಪ್ 2023 ಈ ಬಾರಿ ಭಾರತದಲ್ಲಿ ನಡೆಯುತ್ತಿದ್ದು, ನಿನ್ನೆಯಷ್ಟೇ ವೇಳಾಪಟ್ಟಿಯೂ ಪ್ರಕಟವಾಗಿದೆ.

ಕಳೆದ ಬಾರಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದಾಗ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಈ ಬಾರಿಯೂ ಚರಿತ್ರೆ ಪುನರಾವರ್ತನೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಅಹಮ್ಮದಾಬಾದ್, ಮುಂಬೈ, ಡೆಲ್ಲಿ, ಕೋಲ್ಕೊತ್ತಾ, ಬೆಂಗಳೂರು, ಪುಣೆ, ಚೆನ್ನೈ ಸೇರಿದಂತೆ ವಿವಿಧ ತಾಣಗಳಲ್ಲಿ ಪಂದ್ಯ ನಡೆಯಲಿದೆ. ಆದರೆ ಟೀಂ ಇಂಡಿಯಾ ಕಿಂಗ್ ಕೊಹ್ಲಿ ತಾವು ವಿಶ್ವಕಪ್ ಪಂದ್ಯವನ್ನು ಆಡಲು ಬಯಸುವ ಒಂದು ಮೈದಾನ ಯಾವುದು ಎಂಬುದನ್ನು ಹೇಳಿಕೊಂಡಿದ್ದಾರೆ.

 

ನಾನು ಮುಂಬೈನಲ್ಲಿ ಆಡುವುದನ್ನು ಎದಿರು ನೋಡುತ್ತಿದ್ದೇನೆ. ಈ ಮೈದಾನದಲ್ಲಿ ನಮಗೆ 2011 ರ ವಿಶ್ವಕಪ್ ಫೈನಲ್ ನ ನೆನಪು ಇದೆ. ಹೀಗಾಗಿ ಮತ್ತೆ ಇಲ್ಲಿ ಆಡುವುದು ವಿಶೇಷ ಅನುಭವ ಕೊಡಲಿದೆ. 2011 ರ ವಿಶ್ವಕಪ್ ಆಡುವಾಗ ನಾನು ಯುವ ಆಟಗಾರನಾಗಿದ್ದೆ. ಆದರೆ ಆಗ ಹಿರಿಯ ಆಟಗಾರರು ಎಷ್ಟು ಕಷ್ಟಪಟ್ಟಿದ್ದರು, ಎಷ್ಟು ಕನಸು ಕಟ್ಟಿಕೊಂಡಿದ್ದರು ಎಂಬುದು ನನಗೆ ಗೊತ್ತು’ ಎಂದಿದ್ದಾರೆ ಕೊಹ್ಲಿ.


Share this Story:

Follow Webdunia kannada

ಮುಂದಿನ ಸುದ್ದಿ

ಆವತ್ತು ಸಚಿನ್ ಗಾಗಿ, ಇಂದು ಕೊಹ್ಲಿಗಾಗಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ!