Select Your Language

Notifications

webdunia
webdunia
webdunia
webdunia

ಒಂದು ರಾಶಿ ಚಾಕಲೇಟ್ ಕೊಟ್ರೂ ಧೋನಿ ಸ್ವೀಕರಿಸಿದ್ದು ಒಂದೇ ಒಂದು!

ಒಂದು ರಾಶಿ ಚಾಕಲೇಟ್ ಕೊಟ್ರೂ ಧೋನಿ ಸ್ವೀಕರಿಸಿದ್ದು ಒಂದೇ ಒಂದು!
ಮುಂಬೈ , ಸೋಮವಾರ, 26 ಜೂನ್ 2023 (09:54 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಅವರ ಜನಪ್ರಿಯತೆ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ.

ಇದೀಗ ಧೋನಿ ವಿಮಾನ ಪ್ರಯಾಣದ ವೇಳೆ ಗಗನಸಖಿಯೊಬ್ಬರು ಅವರ ಮೇಲಿನ ಅಭಿಮಾನದಿಂದ ಚಾಕಲೇಟ್ ಗಳನ್ನು ನೀಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧೋನಿ ಕುಳಿತಿದ್ದ ಸೀಟ್ ಬಳಿಗೆ ಟ್ರೇ ತುಂಬಾ ಚಾಕಲೇಟ್ ಗಳನ್ನು ಹೊತ್ತು ತರುವ ಗಗನಸಖಿ ಧೋನಿಗಾಗಿ ವಿಶೇಷ ಸಂದೇಶದ ಚೀಟಿಯನ್ನೂ ನೀಡುತ್ತಾರೆ. ತಮ್ಮ ಮೇಲೆ ಅಭಿಮಾನದಿಂದ ಚಾಕಲೇಟ್ ತಂದಿದ್ದಕ್ಕೆ ಧೋನಿ ಸಂದೇಶ ಬರೆದಿದ್ದ ಚೀಟಿ ಮತ್ತು ಒಂದು ಚಾಕಲೇಟ್ ಪ್ಯಾಕೆಟ್ ನ್ನು ಪಡೆದುಕೊಂಡು ಗಗನಸಖಿಗೆ ಧನ್ಯವಾದ ಸಲ್ಲಿಸುತ್ತಾರೆ. ಆ ಟ್ರೇಯಲ್ಲಿದ್ದಷ್ಟೂ ಚಾಕಲೇಟ್ ಗಳನ್ನು ನೀವೇ ತೆಗೆದುಕೊಳ್ಳಿ ಎಂದರೂ ನಯವಾಗಿ ನಿರಾಕರಿಸಿ ಗಗನಸಖಿಗೇ ಮರಳಿಸುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯನ್ನು ರಿಪ್ಲೇಸ್ ಮಾಡ್ತಾರಂತೆ ಕೇದಾರ್ ಜಾದವ್! ಟ್ರೋಲ್ ಮಾಡಿದ ನೆಟ್ಟಿಗರು