Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್ ಕ್ರಿಕೆಟ್: ಕೊಹ್ಲಿ, ರೋಹಿತ್ ಗೆ ತಂಡದಲ್ಲಿ ಸ್ಥಾನವಿರಲ್ಲ!

ಏಷ್ಯನ್ ಗೇಮ್ಸ್ ಕ್ರಿಕೆಟ್: ಕೊಹ್ಲಿ, ರೋಹಿತ್ ಗೆ ತಂಡದಲ್ಲಿ ಸ್ಥಾನವಿರಲ್ಲ!
ಮುಂಬೈ , ಸೋಮವಾರ, 26 ಜೂನ್ 2023 (08:30 IST)

ಮುಂಬೈ: ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಕ್ರಿಕೆಟ್ ಕೂಡಾ ಇರಲಿದೆ. ಅದಕ್ಕಾಗಿ ಬಿಸಿಸಿಐ ಕೂಡಾ ಪುರುಷರ ತಂಡವನ್ನು ಕಳುಹಿಸಲಿದೆ.

ಆದರೆ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದ ಸ್ಟಾರ್ ಆಟಗಾರರೇ ಇರಲ್ಲ. ಬದಲಾಗಿ ಎ ದರ್ಜೆಯ ತಂಡವನ್ನು ಏಷ್ಯನ್ ಗೇಮ್ಸ್ ಗೆ ಕಳುಹಿಸಲಿದೆ. 

ಇದಕ್ಕೆ ಕಾರಣ ಸೆಪ್ಟೆಂಬರ್ ಕೊನೆಯಲ್ಲಿ ಏಷ್ಯನ್ ಗೇಮ್ಸ್ ಚೀನಾದಲ್ಲಿ ನಡೆಯಲಿದೆ. ಆದರೆ ಇದೇ ವೇಳೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಐಸಿಸಿಯ ಈ ಪ್ರತಿಷ್ಠಿತ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಸ್ಟಾರ್ ಆಟಗಾರರನ್ನು ಏಷ್ಯನ್ ಗೇಮ್ಸ್ ಗೆ ಕಳುಹಿಸದೇ ಇರಲು ಬಿಸಿಸಿಐ ಚಿಂತನೆ ನಡೆಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳಕ್ಕೆ ಭೇಟಿ ಕೊಟ್ಟ ಕೆಎಲ್ ರಾಹುಲ್ ಗೆ ಉಡುಗೊರೆ ಕೊಟ್ಟ ವೀರೇಂದ್ರ ಹೆಗ್ಗಡೆ