Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ದುಡಿಯುವ 15 ಕೋಟಿಯಲ್ಲಿ 2 ಕೋಟಿ ಸಂಜು ಸ್ಯಾಮ್ಸನ್ ಖರ್ಚು ಮಾಡುತ್ತಿರುವುದು ಯಾರಿಗೆ?!

ಐಪಿಎಲ್ ನಲ್ಲಿ ದುಡಿಯುವ 15 ಕೋಟಿಯಲ್ಲಿ 2 ಕೋಟಿ ಸಂಜು ಸ್ಯಾಮ್ಸನ್ ಖರ್ಚು ಮಾಡುತ್ತಿರುವುದು ಯಾರಿಗೆ?!
ಮುಂಬೈ , ಶುಕ್ರವಾರ, 23 ಜೂನ್ 2023 (09:26 IST)
ಮುಂಬೈ: ಐಪಿಎಲ್ ನಲ್ಲಿ 15 ಕೋಟಿ ರೂ. ಸಂಭಾವನೆ ಪಡೆಯುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಪ್ರತೀ ಬಾರಿ 2 ಕೋಟಿ ರೂ.ಗಳನ್ನು ಏನು ಮಾಡ್ತಾರೆ ಗೊತ್ತಾ?

ಸಂಜು ಸ್ಯಾಮ್ಸನ್ ಮಾಡುತ್ತಿರುವ ಕೆಲಸದ ಬಗ್ಗೆ ಗೊತ್ತಾದರೆ ನೀವೂ ಕ್ಲೀನ್ ಬೌಲ್ಡ್ ಆಗುತ್ತೀರಿ. ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟಿಗ ಸಂಜು ಸ್ಯಾಮ್ಸನ್ 2 ಕೋಟಿ ರೂ.ಗಳನ್ನು ಬಡವರಿಗಾಗಿ ಮೀಸಲಿಡುತ್ತಾರಂತೆ. ಈ ವಿಚಾರವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಫಿಟ್ನೆಸ್ ಟ್ರೈನರ್ ರಾಜಮಣಿ ಪ್ರಭು ಬಹಿರಂಗಪಡಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ನೆರವಾಗುವ ಉದ್ದೇಶದಿಂದ ಸಂಜು ಈ ಹಣವನ್ನು ಖರ್ಚು ಮಾಡುತ್ತಾರಂತೆ.  ಈ ವಿಚಾರವನ್ನು ಸಂಜು ತಾವೇ ಎಲ್ಲೂ ಹೇಳಿಕೊಂಡಿಲ್ಲ. ಆದರೆ ರಾಜಮಣಿ ಹೇಳಿದ್ದನ್ನು ಕೇಳಿ ಅಭಿಮಾನಿಗಳು ಸಂಜು ಸಹಾಯ ಮನೋಭಾವಕ್ಕೆ ಕ್ಲೀನ್ ಬೌಲ್ಡ್ ಆಗುವುದರಲ್ಲಿ ಸಂಶಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ಸರಣಿಯಿಂದ ಶುಬ್ಮನ್ ಗಿಲ್ ಔಟ್?!