Publish Date: Wed, 21 Jun 2023 (08:30 IST)
Updated Date: Wed, 21 Jun 2023 (08:53 IST)
Photo Courtesy: Instagram
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ತಿ ಮೌಲ್ಯ 1050 ಕೋಟಿ ರೂ. ತಲುಪಿದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.
ವಿರಾಟ್ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಸುಮಾರು 8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದೀಗ ಕೊಹ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಅಂತೂ ಮತ್ತೆ 10 ಕೋಟಿ ಹೆಚ್ಚು ಸಂಪಾದನೆ ಮಾಡಿದ್ರಿ ಎಂದು ಕಾಲೆಳೆದಿದ್ದಾರೆ. ಕ್ರಿಕೆಟ್ ನಿಂದ ಬಿಡುವಿದ್ದಾಗಲೂ ಕೊಹ್ಲಿ ವರ್ಕೌಟ್ ಮಾತ್ರ ತಪ್ಪಿಸಲ್ಲ. ಆದರೆ ಇದರ ಬಗ್ಗೆ ನೆಟ್ಟಿಗರು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಕೇವಲ ವರ್ಕೌಟ್ ಮಾತ್ರವಲ್ಲ, ಸ್ವಲ್ಪ ಆಟವಾಡಿ ತಂಡಕ್ಕೆ ಐಪಿಎಲ್ ಚಾಂಪಿಯನ್ ಶಿಪ್ ಇಲ್ಲವೇ ಐಸಿಸಿ ಟ್ರೋಫಿ ಗೆಲ್ಲಿಸಿಕೊಡಿ ಎಂದು ಸಲಹೆ ಕೊಟ್ಟಿದ್ದಾರೆ.